ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಳಲು...

ಜನ ೦೭ ಕವನ ೩೫೨ ವೀಕ್ಷಣೆ

ಚಂದ್ರನಿಲ್ಲದ ಇರುಳು ಮೋಡ ಮುಸುಕಿದ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ; ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಹಾಳು ಸುರಿದಿದೆ ಮಂಚ ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ. -ಮಾಲು

ಚಾಲು ಮಾಲು!

ಜನ ೦೩ ಕವನ ೩೬೫ ವೀಕ್ಷಣೆ

-1- ಹುಚ್ಚು ಹುಡುಗಾ...! ಆ ದೇವನೇ ಇಳೆಗೆ ಇಳಿದು ಬಂದು ಸೀತೆಗೆ ರಾಮನಾದ, ರಾಧೆಗೆ ಶ್ಯಾಮನಾದ! ನಿನಗ್ಯಾತಕೋ ಈ ವಿರಾಗ ವಾದ! ನೀನೀಗ... ಆರಾಮವಾಗಿ ಇಲ್ಲಿ ವಿರಾಮವಾಗು ಅಮರವಾಗಿಹ ಅನಂಗನಾಗು ಈ ಸುಂದರಾಂಗಿ ಅಂಗನೆಯ ಸಂಗಿಯಾಗು! -ಮಾಲು ******** -...

ಮಾಲು ಮುತ್ತುಗಳು....

ಜನ ೦೧ ಕವನ ೩೦೬ ವೀಕ್ಷಣೆ

-1- ಹೊಸವರುಷದೆ ನಿನಗೆ ಪಿಸು ಮಾತಿದು ನಲ್ಲ! ವಯಸದು ಜಾರಿದೆಯಲ್ಲ... ಆದರೂ ರಂಗುಳಿಸಿಕೊಂಡಿವೆ ಇನ್ನೂ ನನ್ನ ಚೆಂದುಟಿ, ಗಲ್ಲ! ನಿನ್ನ ನೋಡುವ ಪುಲಕ ನಿನ್ನ ನೋಡುವ ತವಕ ಹಾಗೆ ಇದೆಯಲ್ಲ! -ಮಾಲು -2- ಗೆಳೆಯಾ, ವರುಷ ಬಂದರೇನು ವರುಷ ಹೋದರೇನು ಆ ಹರ...

ಹೊಸ ವರುಷವೆ ಬಾ ಹೊಸ ಹಸೆಗೆ ...

ಡಿಸೆಂ ೩೦ ಕವನ ೫೨೮ ವೀಕ್ಷಣೆ

ಹೊಸ ವರುಷವೆ ಬಾ ಹೊಸ ಹಸೆಗೆ ... ಹರಿಯಲಿ ಗಾನ ಸಂತಸ ತಾನ ಸುಖ ಸುಮ್ಮಾನ ದಿಶೆ ದಿಶೆಗೆ ; ಬಾಳಲಿ ತುಂಬಿದೆ ಬರಿ ನೋವು ತರದಿರು ಮತ್ತೆ ಕಹಿ ಬೇವು; ಮನ ಮನಗಳಲಿನ ಕತ್ತಲು ತೊಲಗಲಿ ಹೂವಿನ ಪರಿಯಲಿ ಜೀವನವರಳಲಿ ಜೀವಕೆ ಬೇಕು ಸಿಹಿ ಮಾವು... ಹಸಿರಾಡಲಿ...

ಪುಟ್ಟ ಕಂದನೆ ಹೆಣ್ಣೀಗೆ ಒಡವೆ!

ಡಿಸೆಂ ೩೦ ಕವನ ೪೦೮ ವೀಕ್ಷಣೆ

ಉದರಕ್ಕೆ ತುತ್ತು ಅಧರಕ್ಕೆ ಮುತ್ತು ಇವೆರಡು ನನ್ನಿಂದ ಎಡೆಬಿಡದೆ ಪಡೆವೆ! ತೊಟ್ಟೀಲ ತುಂಬುವ ಪುಟ್ಟ ಕಂದನೆ ಹೆಣ್ಣೀಗೆ ಒಡವೆ! ಹೇಳೀಗ ಗೆಳೆಯಾ ನೀನದನ ನನಗೆ ಎಂದೀಗೆ ಕೊಡುವೆ?! -ಮಾಲು

ಮಾಲು ಪ್ರಶ್ನೆ!

ಡಿಸೆಂ ೨೭ ಕವನ ೨೫೦ ವೀಕ್ಷಣೆ

ಹುಡುಗಾ, ಮತ್ತೊಮ್ಮೆ ಯೋಚಿಸು... ದುಡ್ಡು ಕೊಡುವ ಮೊದಲು ನೀ ಕುಡಿವ ಈ ಮದಿರೆಗೆ! ತಂದು ಕೊಟ್ಟಿರುವೆಯಾ ಸಾಸಿವೆ ಮೆಣಸು ಜೀರಿಗೆ ನಿನ್ನವಳು ಹಾಕುವ ಅಡಿಗೆಯ ವಗ್ಗರಣೆಗೆ ! -ಮಾಲು

ಮುತ್ತು - ಮತ್ತು

ಡಿಸೆಂ ೨೭ ಕವನ ೨೬೪ ವೀಕ್ಷಣೆ

ಹುಡುಗಾ, ನೀ ಕುಡಿವ ಮದಿರೆಗೆ ಮತ್ತೇರಿಸುವ ಗತ್ತಿದೆ, ಅದು ಗೊತ್ತಿದೆ! ಆದರೆ... ಈ ಹೊತ್ತಿನಲ್ಲಿ ನಾ ಕೊಡುವ ಮುತ್ತಿಗೆ ಗಮ್ಮತ್ತಿದೆ! -ಮಾಲು

ವಿಷದ ವಿಷಯ ವಿಹಾರ...

ಡಿಸೆಂ ೨೩ ಕವನ ೩೪೨ ವೀಕ್ಷಣೆ

ಅಂದು ಅಂಕೆಯಲಿದ್ದೆ ನಾನು ಬಂದು ಕರೆದೊಯ್ದೆ ನೀನು ಬೆಂಕಿ ತಗುಲಿಸಿ ಬೇಲಿಗೆ; ಹಲವು ದಿನಗಳು ಬಾಳಲಿಲ್ಲ ಒಲವು ಹಾಗೆ ಬಾಡಿತಲ್ಲ ಶಂಕೆಯದು ಚಾಚಿತು ನಾಲಿಗೆ ; ಕೊಂಕು ಮಾತನು ಹೊಸೆದೆಯಲ್ಲ ಮಂಕು ಕವಿಸಿ ಮನಕೆ ನೀನು ಉರಿಯ ಹಚ್ಚಿ ಹೂ ಮಾಲೆಗೆ; ನೇಯ್ದ...

ಕೈಲಾಸಂ ಉವಾಚ...

ಡಿಸೆಂ ೨೦ ಲೇಖನ ೮೯೫ ವೀಕ್ಷಣೆ

'ಮೈ ನೋಡೋಕ್ ಜಟ್ಟಿ, ತಲೆ ಖಾಲಿ ಬುಟ್ಟಿ''ಐರಾವತಕ್ಕೂ ಅಡಿ ತಪ್ಪುತ್ತೆ''ಅಪ್ಸತ್ರೂ ಸಾಯಲಿ, ತಿಥಿಗೆ ವಡೆ ಸಿಕ್ತು''ಕಾಡೀಗ್ ಹೋದ್ರೂ ಕಂಪ್ಹರ್ಟ್ಸ್ ಬೇಕು''ತಲೆ ಹೊಯ್ಯುವಾಗ ತಲೆ ಶೂಲೆ ಬಂದ ಹಾಗೆ''ಮೈದಾನದ ಹೆಬ್ಬುಲಿ, ಮನೇಲಿ ಮೂಗಿಲಿ''ಪಾರ್ಲಿಮೆಂ...

ಹೆಣ್ಣ ಕಣ್ಣ ನೋಟ...

ಡಿಸೆಂ ೨೦ ಕವನ ೮೬೨ ವೀಕ್ಷಣೆ

ಹೆಣ್ಣ ಕಣ್ಣ ನೋಟವೇ ಹಾಗೆ... ಚೂರಿಯಂತೆ ಹರಿತ ಅಳಕು ಗಂಡಿನೆದೆಗೆ ಇರಿತ! ಅದಕ್ಕಾಗಿಯೆ...ನನ್ನ ಹುಡುಗಾ ಕಣ್ಣನ್ನು ಕಣ್ಣಿನಲ್ಲಿಟ್ಟು ನನ್ನ ನೋಡುವುದನ್ನೇ ಮರೆತ! -ಮಾಲು

ಪ್ರಳಯವಿಲ್ಲ....!

ಡಿಸೆಂ ೧೯ ಕವನ ೩೨೬ ವೀಕ್ಷಣೆ

ಪ್ರಿಯಾ, ನೀನಿರದೆ... ನಿನ್ನ ಈ ಪ್ರಮದೆ ಜೀವನದೆ ಪ್ರಣಯವಿಲ್ಲ! ನೀ ಪೂರ್ಣ ನಾ ಕಣಕ ಸೇರಿ ಸಿಹಿಯಾಗುವತನಕ ಈ ಜಗದೆ ಪ್ರಳಯವಿಲ್ಲ! -ಮಾಲು

ಮಾಲು ಕಣ್ಣಿನ ಕಂಬನಿಗಳು...

ಡಿಸೆಂ ೧೮ ಕವನ ೨೮೭ ವೀಕ್ಷಣೆ

-1- ಇನಿಯಾ, ಶ್ರುತಿಯು ಮಾಡುವುದೇತಕೆ ಯಾರು ನುಡಿಸದ ವೀಣೆಗೆ! ಸಿಂಗರವು ಬೇಕೇತಕೆ ನೀನೆ ಬರದ ಕೋಣೆಗೆ! -ಮಾಲು *** -2- -ಮಾಲು ಕಗ್ಗತ್ತಲೆಯ ಕಾಡಿನಲಿ ಮಿಣುಕು ದೀಪ! ಬಾಯರಿದವನ ಮುಂದಿರುವ ನೀರಿರದ ಕೂಪ! ಅರಸಿಕನ ಜೊತೆಗೆ ಸರಸ ಸಲ್ಲಾಪ! ಕಣ್ಣು ಕಾ...