ತುಂತುರು ಹನಿಗಳು
ನಾನು ಕೃಷ್ಣಾ....ಎಂದೆ ಇವನು ರಾಧಾ...ಎಂದ ಪ್ರೇಮ ಬೆಳೆಯಿತು ದಿನ ಕಳೆಯಿತು; ಇವನಿಗೆ ರುಕ್ಮಿಣಿಯೂ ಇದ್ದಾಳೆಂದು ಈಗ ತಿಳಿಯಿತು -ಮಾಲು ********* ಇವನಿಗೆ ನನ್ನ ಮೇಲೆ ಮಹಾ ಪ್ರಾಣ ಇದು ಇವರ ಮನೆಯವರ ವಾದ; ಅದಕ್ಕಾಗಿಯೇ ನನಗೆ ಕೃತಜ್ಞ ನಾಗದೆ ಕೃತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನಾನು ಕೃಷ್ಣಾ....ಎಂದೆ ಇವನು ರಾಧಾ...ಎಂದ ಪ್ರೇಮ ಬೆಳೆಯಿತು ದಿನ ಕಳೆಯಿತು; ಇವನಿಗೆ ರುಕ್ಮಿಣಿಯೂ ಇದ್ದಾಳೆಂದು ಈಗ ತಿಳಿಯಿತು -ಮಾಲು ********* ಇವನಿಗೆ ನನ್ನ ಮೇಲೆ ಮಹಾ ಪ್ರಾಣ ಇದು ಇವರ ಮನೆಯವರ ವಾದ; ಅದಕ್ಕಾಗಿಯೇ ನನಗೆ ಕೃತಜ್ಞ ನಾಗದೆ ಕೃತ...
ಸಾಕು ನಿನ್ನ ಐ.ಟಿ. ಡ್ಯೂಟಿ ತೆಗೋ ಸ್ವಲ್ಪ ಬ್ರೇಕು ಸವಿಯುವ ಬಾ ಗೆಳೆಯ ಈಗ ಕಾಫಿ ಮತ್ತು ಕೇಕು ***** ಕಡಲಿನಾಳಕೆ ಇಳಿದು ಇವ ಎಲ್ಲ ತಿಳಿದ ಆದರೆ ನನ್ನ ಮನಸಿನಾಳಕೆ ಇಳಿಯದೆ ಹೊರಗೆ ಉಳಿದ ***** ಪ್ರಿಯಾ, ನೀ ಕೊಟ್ಟ ಮುತ್ತು ಮತ್ತು ನಿನ್ನೊಡನೆ ಕಳ...
ಸದಾ ಸವಿಯಬೇಕು ಗೆಳೆಯ ನಿನ್ನ ಕೆನ್ನೆ ಜೇನು ಆಗಬಾರದೇ ನಾನು ನಿನ್ನ ಮೊಬೈಲ್ ಫೋನು?! -ಮಾಲು
ನನ್ನ ಭರಿಸಿ ಹಾಲನುಣಿಸಿ, ಬೆಳೆಸಿ ಕೊಟ್ಟು ರೆಕ್ಕೆ ಹಾರಲು ಬಿಟ್ಟೆ ಆಘಾದ ಜೀವನದ ಆಕಾಶಕ್ಕೆ; ಅಲ್ಲಿ ಕಲಿತಿದ್ದು ಇಷ್ಟೇ- ಎದೆಗೆ ಬೆಚ್ಚಗಿಹ ತಾಣ ಒಂದೇ ಅಮ್ಮನ ತೋಳಿನಾ ತೆಕ್ಕೆ -ಮಾಲು
ಕಡಲ ತಡಿಗೆ ಹೊಡೆದು ಹೊಡೆದು ಮೊರೆಯುತಿರುವ ಅಲೆಗಳು ಸುಡುವ ಮುಖದ ಸೂರ್ಯ ಅಲ್ಲೆ ಕಳೆದಿಹ ಹಲ ಯುಗಗಳು ಬಿಡದೆ ಬೆಸ್ತ ಬೀಸಿ ಎಸೆದ ಮೀನ ಹಿಡಿವ ಬಲೆಗಳು ಬಿಡಿ ಮರಳಿನ ಮೇಲೆ ನಡೆವ ಅರೆ ಬೆತ್ತಲ ಜನಗಳು ತಡೆ ಇಲ್ಲದ ಈ ನೋಟಕೆ ಎಂದೂ ಸಿಗದು ಗೆಳೆಯ ಹಿಡಿದ...
ಎದೆಗೆ ಎದೆಯು ಒಲಿದು ಬೆಸೆದ ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ! ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ! ಕಳೆದ ನಿನ್ನೆ ಬರುವ ನಾಳೆ ನಮಗಿಲ್ಲ ಅದರ ಚಿಂತೆ ಇಂದು...
ಮುರಳಿ ನಾದ ಮೋದನ ಯಾವ ರಾಗದಲ್ಲಿ ನುಡಿಸಿ ಮೋಹ ಗಯ್ಯಲಿ ಮೋಹನ ಜಗವೆಲ್ಲವು ಸೊಗವಾಯಿತು ಅರುಣ ಕಿರಣ ಸ್ಪರ್ಶಕೆ ಮನ ನನ್ನದು ಶ್ರೀ ಹರಿಯೆ ವಶವಾಯಿತು ಹರ್ಷಕೆ ಅನುರಾಗದ ಸುರಭೋಗವು ಸಂಜೀವನ ಸುರಿಸಿದೆ ನವ ರಾಗದ ನವ ಜೀವನ ನವ ಗಾನವ ನುಡಿಸಿದೆ ಪೊರೆವ ನ...
-೧- ಪ್ರಿಯ, ನನ್ನ ಹೃದಯ ತಂತಿ ಹರಿದ ವೀಣೆ ಒಡಕು ರಾಗದ ವಾದನ ನನ್ನ ನೋವಿನ ಹಾಡ ಸಾಲನು ನುಡಿಸಲೊಂದು ಸಾಧನ -೨- ಇನಿಯನಿಲ್ಲದ ಮೂಕ ವೇದನೆ ಬಿಡದೆ ಎದೆಯನು ಕಾಡಿದೆ ಸನಿಹವಿರುವ ಮುರುಕು ವೀಣೆಗೆ ಮರುಕ ಮಿಡಿಸುವ ಹಾಡಿದೆ -ಮಾಲು
ಹರಯ ಮಯ್ಯ ಕೊರೆವ ಚಳಿಗೆ ನಿದಿರೆಗೆ ವಶವಾದನೆ ಕನಸೊಂದನು ಕಂಡನೆ ಮನದಿ ಮುದಗೊಂಡೆನೆ! ಹರಿವ ತೊರೆಯ ನೀರ ಬದಿಗೆ ಹರಿಯ ನೆನೆದು ತಿರುಗುತಿರಲು ಹಲವು ಬಗೆಯ ಮುಗುಳು ಮುಡಿದು ಚೆಲುವನೊಬ್ಬ ಬಂದನೆ ಕೊಳಲ ಕರದಿ ತಂದನೆ ಬಳಿಗೆ ಬಂದು ನಿಂದನೆ 'ಒಲಿವೆ ನಿನ...
ಬಗೆ ಬಣ್ಣವಾಗಿ ಬಣ್ಣಿಸುವ ಹೆಣ್ಣು ನೀನಲ್ಲವೆ! ಕನಪು ಒನಪು ಒಯ್ಯಾರವೆಲ್ಲ ನಿನಗೆ ಶೋಭೆ ಅಲ್ಲವೆ! ನಾಕ ವೆಣ್ಣು ನರಕ ವೆಣ್ಣು ಜಗದ ಜನರ ಮನದಲಿ ನಿನ್ನ ಮೇಲೆ ಇವರ ಕಣ್ಣು ಪಡೆದರೆರಡು ನಿನ್ನಲಿ! ನಿಮಗ್ನವಾಗಿ ನಗ್ನ ಜಗದೆ ನಾಕ ಮಾಡುವೆ ಭಗ್ನ ಹೃದಯಕಗ್...
ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ ಸಣ್ಣಗೆ ಕೊಳಲನು ಊದುತ ಬಂದ ಒಲವನು ತಂದ ಚೆಲುವ ಮುಕುಂದ ಕನಸಲು ಬಂದು ಎದೆಯೊಳು ನಿಂದ ರಕ್ಕಸ ಮಾವನ ರಕ್ಕಸಿ ಪೂತನ ಚಿಕ್ಕವನಾದರು ಚೊಕ್ಕದಿ ಕೊಂದ ಗಿರಿಯನು ಎತ್ತಿದ ಉರಗವ ಮೆಟ್ಟಿದ ಜಗವನು ಪೊರೆದ ನಂದನ ಕಂದ ಅಮ್ಮ...
ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವತನಕ ಕೇಳು ಕೇಳುತಲಿರುವೆ ಹರಿ ನಿನ್ನ ಸುರಗಾನ ನೀ ನನಗೆ ಕೊಟ್ಟ ಮನ ತಣಿವತನಕ ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇವ ಲೋಕದ ಗಾನ ಸುಳಿದು ತೇಲೆ ಕಾದು ಕಾಯುತಲಿರುವ...