ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಬಲೆ..

ಅಕ್ಟೋ ೧೦ ಕವನ ೪೨೫ ವೀಕ್ಷಣೆ

ಬಳಲಿಸಿವೆ ಎಡೆಬಿಡದೆ ; ಹೊರಗೆ ಸುರಿಯುವ ಮಳೆಯು ಕರುಳ ಕೊರೆಯುವ ಚಳಿಯು; ಇರುಳ ಕಳೆಯುವ ಮೊದಲೆ ಬರಸೆಳೆದೆದೆಗೆ ಎದೆಯನು ಕೊಡುವ ಇರುವ ದುಗುಡವ ಕಳೆವ ಒಲವನೀಯುವ ಇವ ಬರಬಾರದೇ? -ಮಾಲು (ಸ್ಫೂರ್ತಿ: ನಲವತ್ತರ ದಶಕದ ಗಾಯಕಿ ಅಮೀರ್ ಬಾಯ್ ಕರ್ನಾಟಕಿ ರವ...

ಹೊಸತಾದ ಹೂ ನಾನು....

ಅಕ್ಟೋ ೦೯ ಕವನ ೩೬೭ ವೀಕ್ಷಣೆ

ಗೆಳೆಯಾ, ಹೊಸತಾದ ಹೂ ನಾನು ಹಸನಾಗಿ ಅರಳಿಹೆನು ಹೊಸೆದು ಎದೆಯನೆದೆಗೆ ಬಾಳ ಉಸಿರಾಗು ಬಾ.... ಮಧು ಹರಿವ ಭಾಂಡವನು ಎದೆಯೊಳಿಟ್ಟಿಹೆ ನಾನು ಅದರಕಧರವ ಬೆಸೆದು ಬಾಳ ಬಿಸಿ ಮಾಡು ಬಾ.... -ಮಾಲು

ವಿಷಾದ...

ಅಕ್ಟೋ ೦೭ ಕವನ ೨೭೧ ವೀಕ್ಷಣೆ

-೧- ಪ್ರಿಯಾ, ನೀನು ಅವನಂತೆ... ನನ್ನ ನೆನಪು ನಿನಗಿಲ್ಲ; ಆದರೆ ನಾ ಶಕುಂತಳಲ್ಲ ನೀ ಕೊಟ್ಟ ಉಂಗುರುವ ಮರೆತಿಲ್ಲ -ಮಾಲು -೨- ಪ್ರಿಯಾ, ಗೀಚಿದ್ದೆ... ಪತಿರ್ವ್ರತೆ - ಮಂಡೋದರಿ...ತಾರ...ಸೀತೆ.... ಆದರೆ ಅಲ್ಲಿ ನನ್ನೇಕೆ ಮರೆತೇ? -ಮಾಲು ವಿಷಾದ...

ಇದು ಸರಿಯೇ ನಲ್ಲ...?

ಅಕ್ಟೋ ೦೭ ಕವನ ೨೬೯ ವೀಕ್ಷಣೆ

ಕೊರಳಿಗೆ ಹರಳಿನ ಮಾಲೆ ಕಿವಿಗೆ ತೂಗವ ಓಲೆ ಕೂಳಿಗೆ ಬೆಳ್ಳಿಯ ತಟ್ಟೆ ನಲ್ಲ, ಇವೆಲ್ಲವ ಮರೆಯದೆ ಕೊಟ್ಟೆ ಆದರೆ.... ಎದೆಗೆ ಬೇಕಾದ ಒಲವನ್ನೇಕೆ ಕೊಡುವದ ಮರೆತು ಬಿಟ್ಟೆ? -ಮಾಲು

ಹೆತ್ತವರ ಬಿಟ್ಟಾಯ್ತು...

ಅಕ್ಟೋ ೦೬ ಕವನ ೨೭೦ ವೀಕ್ಷಣೆ

ಗೆಳೆಯಾ, ಹೆತ್ತವರ ಬಿಟ್ಟಾಯ್ತು, ಮುಚ್ಚಿಟ್ಟ ಒಲವನ್ನು ನಿನ್ನಲ್ಲಿ ಇಟ್ಟಾಯ್ತು, ಮತ್ತೇನು ತಿಳಿಯದೆ ಮುತ್ತನ್ನು ಕೊಟ್ಟಾಯ್ತು! ಇನ್ನೇನು ಹೇಳಲಿ?! ಬಾಳಾಯ್ತು ಕೇಲಿ; ತರಲಿಕ್ಕೆ ತಡವೇಕೆ ಬೆರಳೀಗೆ ಉಂಗುರಾ, ಕೊರಳೀಗೆ ತಾಳಿ; ನಾ ನಿನಗೆ ಸರಿಯೆಂದು...

ಹೀಗೇಕೆ...?!

ಅಕ್ಟೋ ೦೫ ಕವನ ೪೨೦ ವೀಕ್ಷಣೆ

ಪ್ರಿಯಾ, ಹಸಿರಾಡುವ ಮರ, ನೆರಿಗೆಯ ನೀರ ಅಲೆ, ಕೆಂಪಾದ ಸೂರ್ಯ, ಮೆಲ್ಲನೆ ಹಾರುವ ಬೆಳ್ಳಕ್ಕಿಯ ಸಾಲು ಬಗೆ ಬಾನಿನ ಬಣ್ಣ; ಬಳಿ ಇರಲು ನೀನು ಏಕೆ ಸೆಳೆಯುವುದಿಲ್ಲ ಇವೆಲ್ಲಾ ನನ್ನ ಕಣ್ಣ?! -ಮಾಲು

ಒಲುಮೆ

ಅಕ್ಟೋ ೦೫ ಕವನ ೫೫೨ ವೀಕ್ಷಣೆ

ಸೊಗದ ಚೆಲುವನೆ ನಿನ್ನ ನಗುವ ಮೊಗವನು ನೋಡೆ ಹಲವು ಬಗೆಯಲಿ ಒಲವು ಮೊಗೆವುದೆದೆಯಲಿ ಏಕೆ ಚಿಲುಮೆಯಂತೆ?! ಮುದದಿ ನೆನೆಯಲು ನಿನ್ನ ಮೃದು ಹೃದಯದಲಿ ಇಂದು ಧಗ ಧಗಿಸುತ ಒಲವು ಬಿಡದೆ ಜ್ವಲಿಸುತಿಹುದೇಕೆ ತಿದಿ ಒತ್ತಿದಾ ಆ ಕುಲುಮೆಯಂತೆ?! -ಮಾಲು

ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ..

ಅಕ್ಟೋ ೦೪ ಕವನ ೪೭೮ ವೀಕ್ಷಣೆ

ಒಲವಿನ ಹಾಡಿಗೆ ಪಲ್ಲವಿ ಬಿಡಿಸಿ ಹೋದೆ ಎಲ್ಲಿ ಚೆನ್ನ? ಮನವನು ತಣಿಸುವ ಚರಣವ ಬರೆಯದೆ ಹಾಡಾಗುವ ಮುನ್ನ ತೊರೆದೆ ಏಕೆ ನನ್ನ? ಕೆಲವೇ ಚಣದಲಿ ಬಾಳನು ಬೆಳಗಿ ಮೆರೆಯಿತಲ್ಲ ಪ್ರೀತಿ ಕರಗಿತೆ ಬಾನಲಿ ಮುಸುಕಿದ ಮುಗಿಲಲಿ ಮಳೆ ಬಿಲ್ಲಿನ ರೀತಿ ಇದೇ ಏನು ನೀತ...

ಕವಿತೆ

ಅಕ್ಟೋ ೦೩ ಕವನ ೩೨೩ ವೀಕ್ಷಣೆ

ಅತ್ತ ಎಲ್ಲೋ ನೋಡಿ ನಡೆವ ಕಾರ್ನರ್ ಮನೆ ಕಾಮಿನಿ! ಕತ್ತೆತ್ತಿ ನನ್ನ ನೋಡದಿರುವ ಮಹಡಿ ಮನೆ ಮಾಲಿನಿ! ನನ್ನಿರವ ಕೂಡ ಲೆಕ್ಕಿಸದ ಸೆಲ್ಲರ್ ಮನೆ ಶಾಲಿನಿ! ಮತ್ತೆ ಆ ಚಾಂದಿನಿ! ದಕ್ಕಲಿಲ್ಲ ಯಾರು ಇವರು...! ಸಿಕ್ಕುವಳು ಎಲ್ಲಿ ಅವಳು, ದಕ್ಕಿ ಬರುವ ಕಾಮ...

ಕವಿತೆ

ಅಕ್ಟೋ ೦೩ ಕವನ ೩೪೩ ವೀಕ್ಷಣೆ

ತಂಪಾಗಬೇಕು ಈ ನೆಲ ಸೂರ್ಯನ ತಪನದಲ್ಲಿ ಬೆಂದು ಬೆವರನಿಳಿಸಿ ಸೊಂಪಾಗಬೇಕು ಮೈ ಹಿಡಿಯ ಅನ್ನ ತಿಂದು ಒಡ್ಡಿದರಷ್ಟೆ ತಲೆ, ಉಳುವ ನೆಲಕೆ ಸುಡು ಬಿಸಿಲಿನಲ್ಲಿ ಕೊಂಚ ಹೊತ್ತು ತೆನೆ ತೆನೆಯ ಬೆಲೆ ತಿಳಿಯುವುದು; ಸುಕೃತವು ಖಚಿತ ತಿಂದ ಒಂದು ತುತ್ತು ರಾಮ ರ...

ನಲ್ಲ ಇವ ಬಹನೆಂದು...

ಸೆಪ್ಟೆಂ ೨೪ ಕವನ ೩೦೯ ವೀಕ್ಷಣೆ

ನಲ್ಲ ಇವ ಬಹನೆಂದು ಮೊಲ್ಲೆ ಮುಡಿದಿಹೆ ಇಂದು ಇಲ್ಲೆ ಈಗಲೇ ಬಂದು ಬೆಲ್ಲವಡಗಿಹ ಸಿಹಿ- ಸೊಲ್ಲ ನುಡಿಯುವನೇ? ಹರಳಿನುಂಗುರವ ಬೆರಳಿಗಿಟ್ಟೆ ಸರಳ ಸರವೊಂದ ಕೊರಳಿಗಿಳೆಬಿಟ್ಟೆ ಹಳದಿ ಸೀರೆಯನುಟ್ಟೆ ಹೊಳೆವ ಬಳೆಗಳನೂ ತೊಟ್ಟೆ; ಬಳಿ ಸೆಳೆದೆದೆಗೆ ಎದೆಯನು ಕ...

ಬಾನಂಗಳದೆ ಬೆಳದಿಂಗಳಿದೆ ...

ಸೆಪ್ಟೆಂ ೧೫ ಕವನ ೩೯೯ ವೀಕ್ಷಣೆ

ಬಾನಂಗಳದೆ ಬೆಳದಿಂಗಳಿದೆ ತಿಳಿ ನೀರಿದೆ ಹೊಳೆಯಲ್ಲಿ... ಸುಳಿದಾಡುತಲಿ ಕೊಳಲೂದುತಲಿ ಕಣ್ ಸೆಳೆಯುವ ಹರಿಯೆಲ್ಲಿ ಮಹಾನೀಯನು ಇವನೆಲ್ಲಿ ಇವ ಇರುವನೆ ಮರೆಯಲ್ಲಿ?! ನೇಹದಲಿ ಅತಿ ಮೋಹದಲಿ ರತಿ ರೂಪಿಯ ಜೊತೆಯಲ್ಲಿ ಹಾಡುತಲಿ ಜಲಕ್ರೀಡೆಯಲಿ ಮರೆತಿಹನೆ ನನ್...