ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾಲು ಮನದ ಮಾತುಗಳು...

ಡಿಸೆಂ ೧೭ ಕವನ ೩೬೦ ವೀಕ್ಷಣೆ

-1- ಚೆನ್ನಿರುವುದೇ ಕೊಳವುನೀರಿರದಿದ್ದರೆ!ಅಂತೆಯೇ ನಾ ಗೆಳೆಯನೀನಿರದಿದ್ದರೆ! *** -2- ನೆಚ್ಚಿಕೆಯಿರದೆ ನನ್ನಲ್ಲಿ ನನ್ನ ಮೆಚ್ಚಿದವನಿವನು ಕೊಡುವ ಬೆಚ್ಚಗಿನ ಚುಂಬನವು ಮಣ್ಣು ಬೆರೆಸಿದ ಜೇನು *** -3- ಹುಡುಗಾ, ನಿನ್ನ ಎದೆಯಲಿ ನೆಟ್ಟು ಒಲವನು ನಾ...

ವಿಷಾದ...

ಡಿಸೆಂ ೧೭ ಕವನ ೩೨೨ ವೀಕ್ಷಣೆ

ಬೆಳೆವ ಚಿಗುರನು ಚಿವುಟಿ ಉಗುರಿಂದ! ಅರಳಿದಾ ಹೂವನ್ನು ಸುರುಟಿ ಬೆರಳಿಂದ! ದೂರ ಸರಿದನಲ್ಲಾ ಈ ನನ್ನ ನಲ್ಲ ಒಲಿದ ಹೆಣ್ಣಿನ ಒಲವ ತುಳಿದು ಕಾಲಿಂದ! ಬದುಕಾಯಿತು ಭಾರ; ಸವಿಯು ಸರಿಯಿತು ದೂರ ಈ ಒಡೆದ ಹಾಲಿಂದ -ಮಾಲು

ಗಂಡು-ಹೆಣ್ಣು

ಡಿಸೆಂ ೧೧ ಕವನ ೧,೨೦೧ ವೀಕ್ಷಣೆ

-1- ಈ ಗಂಡೆಂದರೆ ಹೀಗೇ ಕಣೇ... ನಾನೇ ಹೋಗಿ ಬಿದ್ದ ಸೆರೆಮನೆ! ನನ್ನ ಸ್ವಚ್ಛಂದವ ಬಿಗಿದು ಕಟ್ಟಿ ಕಳೆದೆ ಇಲ್ಲೇ ನನ್ನ ಅಂತರಂಗ ಸ್ವರವನೆ! ಈ ಗಂಡೆಂದರೆ ಹೀಗೇ ಕಣೇ... ಬಿಟ್ಟು ಬಿಡದ ಬಾಹು ಬಂಧನ! ದೂರವಿರುವ ಅದರ ಪರಿಧಿಯನ್ನು ಮುಟ್ಟುವಷ್ಟೂ ನನ್ನಲ...

ಮಾಲು ಉವಾಚ...

ಡಿಸೆಂ ೦೬ ಕವನ ೩೧೭ ವೀಕ್ಷಣೆ

-1- ನನಗೆ ವೆಚ್ಚಕ್ಕೆ ಹೊನ್ನಿದೆ! ಬೆಚ್ಚನೆಯ ಮನೆಯೂ ಇದೆ! ಆದರೆ....ನನ್ನ ಬಿಚ್ಚು ಮನಸ್ಸಿಗೆ ಮೆಚ್ಚಿ ಹುಚ್ಚು ಒಲವಿನಾ ಕಿಚ್ಚು ಹಚ್ಚಲು ಒಬ್ಬ ಹುಡುಗಾ ಬೇಕಿದೆ! *** -2- ಹುಡುಗಾ, ನನ್ನ ನೀಳ ಮೂಗು ಬೊಗಸೆ ಕಣ್ಣು ಮತ್ತು ಮಲಗೋಬ ಮಾವಿನ ಗಲ್ಲ......

ಮಾಲು ಮುತ್ತುಗಳು....

ಡಿಸೆಂ ೦೫ ಕವನ ೩೯೯ ವೀಕ್ಷಣೆ

ಆ ವಿರಹಿ ರಾಮ ಸೀತೆಗಾಗಿ ಹುಡುಕಾಡಿದ ಕಾಡ ಅಲೆದಾಡಿದ! ನಾನಿಲ್ಲದೆ, ನನ್ನ ಹುಡುಗನೂ ವಿರಹಿ! ಎಲ್ಲೂ ಹುಡುಕಾಡದೆ, ನನ್ನ ಮೊಬಯ್ಲ್ ಗೆ ಫೋನ್ ಮಾಡಿದ! *** -2- ಹುಡುಗಾ....ಹೌದು, ನಾವು ನವ ತರುಣಿಯರು ಬಳುಕುತ್ತೇವೆ...ಹಾಗು ದುಡಿದು ಬದುಕುತ್ತೇವೆ!...

ಈ ಎಳೆ ಬಿಸಿಲು, ಸುಂದರ ಹಗಲು ....

ನವೆಂ ೨೭ ಕವನ ೪೨೩ ವೀಕ್ಷಣೆ

ಈ ಎಳೆ ಬಿಸಿಲು, ಸುಂದರ ಹಗಲು ನೀನಿರದೆ ಈಗ ಭೀಕರ ಇರುಳು ... ಇನ ದರುಶನದೆ ನಳನಳಿಸಿದೆ ಭುವನ ಬನದಲ್ಲಿದೆ ಮಲ್ಲಿಗೆ, ಮೊರಗಾ, ಧವನ; ಬೆಳಗಿನ ಮೋಡಿಗೆ ಅರಳದು ಹೃದಯ ನೀನಿಲ್ಲಿರದಿರುವುದೆ ಇದಕೆ ಕಾರಣ ಗೆಳೆಯಾ ಹೊರೆಯಾಗಿದೆ ಕೇಳು ನೀನಿಲ್ಲದ ಬಾಳು ಯಾ...

ಮಾಲು ಮಾತುಗಳು...

ನವೆಂ ೨೨ ಕವನ ೩೩೬ ವೀಕ್ಷಣೆ

-1- ದೇಶದಲ್ಲಿ ಜನ ಸಂಖ್ಯೆ ಕೋಟಿ ಕೋಟಿ ಕೋಟಿ ಆದರೂ ನಿಂತಿಹುದು ಎಲ್ಲಿ ಗಂಡು ಹೆಣ್ಣ ಭೇಟಿ?! ತುತ್ತಿಲ್ಲವೆಂದು ಕೊಡದೆ ಇರರು ತುಟಿಗೆ ತುಟಿಯ ಮುತ್ತು! ನನ್ನ ಮಡಲಿಗೊಂದು ಮಗುವು ಬರಲಿ ಇದೇ ವಿಚಾರ ಹೊತ್ತು! ***** -2- ಹೌದು, ನನ್ನವ ಹಲವು ಭಾಷೆಯ...

ಹನಿಗಳು...

ನವೆಂ ೧೮ ಕವನ ೪೨೧ ವೀಕ್ಷಣೆ

ಪ್ರಿಯಾ, ನನ್ನೊಪ್ಪಿಗೆ ಇಲ್ಲದೆ ಅಪ್ಪಿದ ತಪ್ಪಿಗೆ ತೆರಬೇಕಲ್ಲವೆ ಸುಂಕ! ತುಟಿ ತುಟಿಯೊತ್ತಿನ ಮುತ್ತನು ಕೊಟ್ಟು ತಪ್ಪದೆ ತೀರಿಸು ಲೆಕ್ಕ! *** ಕೊಟ್ಟರಾಯಿತೆ ಒಡಲಿಗೆ ಅಷ್ಟು ತುತ್ತುಘಳಿಗೆಗೊಂದು ಮುತ್ತು?ಕೊಡದಾದೆ ಇದುವರೆಗೆಒಲವನೆದೆಗೆ....ಪ್ರಿಯ...

ಮಿರ ಮಿರ ಮಿರುಗುವ ಮೋಹದ ಮೋರೆ....

ನವೆಂ ೧೬ ಕವನ ೭೬೭ ವೀಕ್ಷಣೆ

ಮಿರ ಮಿರ ಮಿರುಗುವ ಮೋಹದ ಮೋರೆ ಹಣ್ಣಾಗಲಿದೆ ಮಣ್ಣಾಗಲಿದೆ ನಾಳೆಗೆ ನೀರೆ! ಆ ಕಥೆ ಬೇರೆ ! ನಗುವಿನ ರೂಪದ ಮಾಯೆಯ ಜಾಲ ಸೊಬಗನು ಸಾರುವ ತೊಗಲಿನ ಚೀಲ ತೂಗುತ ಹಾರುವ ಹೆರಳಿನ ಮಾಲ ಮೊಗದಲಿ ಉಳಿಸದು ಕರಾಳ ಕಾಲ! ಹುಂಬನ ಮಾಡುವ ಸಿಹಿ ಸಿಹಿ ಸೊಲ್ಲ ಹಂಬಲವ...

ಹೌದು, ಹೆಣ್ಣು...

ನವೆಂ ೧೩ ಕವನ ೪೨೭ ವೀಕ್ಷಣೆ

ಹೌದು, ಹೆಣ್ಣು...ಯಾರದೋ ಗೋಡೆಯ ಪಟವಾಗುತ್ತಾಳೆ ಒಮ್ಮೊಮ್ಮೆ ಬೇಡದವರ ಬಾಳ ಪುಸ್ತಕದ ಪುಟವಾಗುತ್ತಾಳೆ ಹಾಗೆಯೆ ...ಹಲವರಿಗೆ ದಿಟವ ಹೇಳಿಅವರ ಕೈಗೆಟುಕದೆ ಕಟುವಾಗುತ್ತಾಳೆ!-ಮಾಲು

ಹಸಿರಾಡಿಸಿ ಹೂವರಳಿಸಿ....

ನವೆಂ ೧೨ ಕವನ ೩೭೨ ವೀಕ್ಷಣೆ

ಹಸಿರಾಡಿಸಿ ಹೂವರಳಿಸಿ ಹದ ಮಾಡಿಸಿ ಎದೆಯ ಜೊತೆಗೂಡಿಸಿ ಹೊಸ ಹಾಡಿಗೆ ಗಿಳಿ ಕೋಕಿಲ ಉಲಿಯ ಕಾಲಿಟ್ಟಿದೆ ಕದ ತಟ್ಟಿದೆ ಹಸನಾಗಿಹ ಹರಯ ನಲಿವೊಂದನೆ ಹರಿಸುವ ಬಾಳೆಂಬುವ ತೊರೆಯ ತುಂಬಲು ತಾ ಸೆಲೆಯೊಂದನು ನನ್ನೊಲವಿನ ಗೆಳೆಯ -ಮಾಲು

ಭಾನುವಿಗೆ ಮೊದಲೆದ್ದು ದೀಪ ಹಚ್ಚಿಟ್ಟಿದ್ದು...

ನವೆಂ ೧೧ ಕವನ ೨೭೪ ವೀಕ್ಷಣೆ

ಭಾನುವಿಗೆ ಮೊದಲೆದ್ದು ದೀಪ ಹಚ್ಚಿಟ್ಟಿದ್ದು ಸಿಡಿಸುತ್ತ ಸಿಡಿಮದ್ದು ಬೆಳಕು ಶಬ್ದದ ಸದ್ದು ತಮದೈತ್ಯ ಒಳಗಿದ್ದು ಜ್ಞಾನರವಿ ಮರೆಸಿದ್ದು ನರಕಾರಿ ಕೊಂದಿದ್ದು ಮನುಜಬಯಸಿದ್ದು ವಾಮನರಲ್ಲ ನಾವ್ ತಿವಿಕ್ರಮ ಪ್ರವೃತ್ತಿಬಲಿಮಸ್ತಕ ವಿಧ್ವoಸಕರನೊತ್ತಿ ಕೃ...