ಈ ಮಾಲು ಕೂಡ ಒಂದು ಹೆಣ್ಣು...
ಈ ಮಾಲು ಕೂಡ ಒಂದು ಹೆಣ್ಣು, ಒಳ್ಳೆಯ ಹಣ್ಣಂತೆ ಇರುವಳು! ಹಸಿರು ಬಳ್ಳಿಯಂತೆ ಹುಡುಗ, ತೆಳ್ಳಗಿರುವಳು! ಹೊಳಪುಗಣ್ಣಿನವಳು ಒಳ್ಳೆ ಬಣ್ಣದವಳು ಎಲ್ಲ ಬಲ್ಲ ನಲ್ಲ ಕೊಡುವ ಮೊಲ್ಲೆ ಹೂವ ಎಂದೂ ಇವಳು ಒಲ್ಲೆ ಎನ್ನಳು! -ಮಾಲು
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ಮಾಲು ಕೂಡ ಒಂದು ಹೆಣ್ಣು, ಒಳ್ಳೆಯ ಹಣ್ಣಂತೆ ಇರುವಳು! ಹಸಿರು ಬಳ್ಳಿಯಂತೆ ಹುಡುಗ, ತೆಳ್ಳಗಿರುವಳು! ಹೊಳಪುಗಣ್ಣಿನವಳು ಒಳ್ಳೆ ಬಣ್ಣದವಳು ಎಲ್ಲ ಬಲ್ಲ ನಲ್ಲ ಕೊಡುವ ಮೊಲ್ಲೆ ಹೂವ ಎಂದೂ ಇವಳು ಒಲ್ಲೆ ಎನ್ನಳು! -ಮಾಲು
ಒಲವು ಬಾರದಿನ್ನು ಸನಿಹ ಇಂಗಲಿಂದೆ ಹರಯ ಒಡೆಯಲಿಂದೆ ಹೃದಯ ಬೂದಿಯಾಗಿ ನನ್ನ ಇರುವು ಆಗಬೇಕು ಶೂನ್ಯ ಹಗ್ಗವೆಂದು ಹಿಡಿದುದೆಲ್ಲ ಆಗಬೇಕು ಹಾವು; ಪ್ರೇಮ-ಪ್ರೀತಿ, ಕಾಮ ಭೀತಿ ನಿದ್ದೆ, ಹಸಿವು, ನೋವು-ನಲಿವು ಹುಟ್ಟಿದೆಡೆಯೆ ನಾಶವಾಗಿ ಬಳಿಗೆ ಬರಲಿ ಸಾವ...
ಬೇಡವೆಂದು ದೂರವಿಟ್ಟೆ ನಿನ್ನ ಹೂವನು...ಎದೆಯೊಳಿಂದು ಹರಿದು ಬಿಟ್ಟೆ ಸುಡುವ ಕಾವನು...ನನ್ನ ಬೆರಳಲಿಂದೆ ನೀನು ಕೇಳಲೆಂದೆ ಹಾಡ ಮಾಡಿ ನುಡಿಸಿಬಿಡುವೆ ನನ್ನ ನೋವನು...-ಮಾಲು
ಬೆಳದಿಂಗಳ ರಾತ್ರಿಯಲ್ಲಿ ಬೆರಗಾಯಿತು ಕಣ್ಣು ತಿಳಿ ನೀರಿಗೂ ಮೈ ಹೊಳಪಿದೆ ಹೊನ್ನಾಗಿದೆ ಮಣ್ಣು ! ಹರಯದ ಹೊಸ ಆಸೆಯ ಬಿಸಿ ಮಾಡುವ ಸಮಯ ಇರಬಾರದೇ ಇಲ್ಲಿ ನೀನು ನಿಜ ಮಾಡಲು ಭ್ರಮೆಯ! ಸವಿಯಬೇಕು ಮತ್ತೆ ನಾನು ಮನದಿ ಮೆದ್ದ ಬೆಲ್ಲ ನಿನ್ನ ಸಿಹಿ ಮುತ್ತಿಗ...
ಬೆಳದಿಂಗಳ ಇರುಳಿಲ್ಲಿ ಹಾಡಿದೆ ಕೊರಳಲ್ಲಿ ಘಮ ಘಮಸುತಲಿಹುದು ಅರಳಿದ ಈ ಕುಸುಮ; ಮನವೆಲ್ಲವು ಇಂದು ನೀನೆ ತುಂಬಿರಲು ಈ ಜೀವಕೆ, ಗೆಳೆಯ ಇನ್ನೆಲ್ಲಿಯ ವಿಷಮ! -ಮಾಲು
ಗೆಳೆಯಾ... ಈ ಮಾಗಿಯ ಚಳಿಯಲ್ಲಿ ಮೈಯಾಯಿತೇಕೆ ಪುಲಕ! ತೆರೆಯಿತೇಕೆ ಸವಿ ಕನಸಿಗೆ ಎದೆ ಬಾಗಿಲ ಚಿಲಕ! ತಿಳಿಯದಾಯಿತೇಕೆ ಮೊದಲೆ ನೀ ಸುಳಿಯುವ ಜಾಡು! ಉಲಿಯುತ್ತಿದ್ದೆ ಇಂದೇ ನಾನು... ನೀನಾಡುವ ಮಾತಲ್ಲಿ ನೇಯ್ದ ಒಂದು ಒಲವಿನ ಹಾಡು! -ಮಾಲು
ಈ ನನ್ನವ ಕೊಟ್ಟಿದ್ದುಂಟು ಜಡೆಗೆ ಮುಡಿವ ಮಲ್ಲಿಗೆ... .................. ಆ ಪಂಚರಂಗಿ ಮೂಲೆ ಮನೆ ಮಲ್ಲಿ ಗೆ! .................... ಮೊಲ್ಲೆಯನ್ನು ಕೊಟ್ಟ ರಾತ್ರಿ ನಮ್ಮ ಮನೆಯಲ್ಲಿ ಏನಾಯಿತೆಂಬ ವಿಚಾರ ಗೊತ್ತುಂಟು..... ಗೋಡೆಯ ಮೇಲಿರುವ ಲೊ...
-1- ಗೆಳೆಯಾ ನೀನು... ಹಾವು ಏಣಿ ಆಟದಲ್ಲಿ ನನಗೆ ಏಣಿಯಾಗದೆ ನುಂಗುವ ಹಾವಾದೆ... ನನ್ನ ನಿಜ ಬಾಳಿನ ಊಟದಲ್ಲಿ ಸಿಹಿ ಬೆಲ್ಲವಾಗದೆ ಕಹಿ ಬೇವಾದೆ ... ************* -2- ಕೊಟ್ಟ ಸವಿ ಹಣ್ಣನ್ನು ಮಣ್ಣಿಗೆ ತೂರಿ ಇಟ್ಟ ಪ್ರೀತಿಗೆ ಹಾಕಿ ಸರಿಯಾಗಿ ಚೂ...
-ಮಾನಿನಿ ಏರಿಳಿಯದ ಕಡಲು ಹಸಿರಾಡದ ಬಯಲು ನೀರಿಲ್ಲದ ಹೊನಲು ಮಗುವಾಡದ ಮಡಿಲು ಸ್ವರವಿಲ್ಲದ ಕೊರಳು ಉಸಿರಾಡದ ಒಡಲು ಇನಿಯಾ... ನೀನನ್ನೊಡನಿಲ್ಲದ ಇರುಳು.... -ಮಾಲು
-ಚಂಚರೀಕ ಅರಳಿದಾ ಹೂ ಕನಸಿಗೆ ಉರಿಯ ನೀ ತಾಗಿಸುವುದೆ ತೊರೆದು ನೀ ನನ್ನ ಮನಸಿಗೆ ವಿರಹವನು ನೀ ಹಾಯಿಸುವುದೆ ಸಖನಿಲ್ಲದೆ ಸುಖವೆಲ್ಲಿದೆ ಜೊತೆಯಿಲ್ಲದೆ ಮತಿ ನೀಗಿದೆ ಬದುಕಿಲ್ಲಿ ನೀನಿಲ್ಲದೆ ಶ್ರುತಿಯಿಲ್ಲದಾ ಹಾಡಾಗಿದೆ ಬರುವೆಯೋ ಬರದಿರುವೆಯೊ ಬಾಳೀಗ...
ನೆನಪುಗಳು ಮಾಸದು ಕನಸಿನಾ ಹಾಗೆ! ಗೆಳೆಯ, ನಾ ನಿನ್ನ ಮರೆಯುವುದು ಹೇಗೆ?! ಬೊಗಸೆಯಲಿ ಭರವಸೆಯ ಹಿಡಿದು ತಂದವನೆ ಬದುಕಿನಲಿ ನನ್ನೊಡನೆ ನಡೆವೆ ಎಂದವನೆ ನಿನ್ನ ಬರುವಿಕೆಗೆ ನಾ ಕಾಯುವೆನು, ಬಾರ ಸಂಗವಿರದಂಗನೆಯ ಬದುಕು ನಿಸ್ಸಾರ -ಮಾಲು
-1- ಪ್ರಿಯ, ನಿನಗೆ ನನ್ನನ್ನೇ ಹಾಸಲು ಮತ್ತು ಹೊದೆಯಲು ಕೊಟ್ಟಿದ್ದರೆ ನೀ ನನ್ನ ಒದೆಯಲೂ ಉಪಯೋಗಿಸಿದ್ದು ನನ್ನ ದುರದೃಷ್ಟ -ಮಾಲು ****************** -2- ನಾನು ಇವನು ಇರುವ ಊರಿನಲ್ಲಿ ಕುಡಿವ ನೀರಿಗೂ ಬರವಿದೆ ಆದರೆ... ನಾನು ತವರ ನೆನೆಸಿದರೆ...