-ಸಮರ್ಪಣೆ
-ಸಮರ್ಪಣೆ ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವ ತನಕ... ಕೇಳು ಕೇಳುತಲಿರುವೆ ಹರಿ ನಿನ್ನ ಸುರ ಗಾನ ನೀ ನನಗೆ ಕೊಟ್ಟ ಮನ ತಣಿವ ತನಕ... ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇವ ಲೋಕದ ಗಾನ ಸುಳಿದು ತೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
-ಸಮರ್ಪಣೆ ನೋಡು ನೋಡುತಲಿರುವೆ ಹರಿ ನಿನ್ನ ಸುರವದನ ನೀ ನನಗೆ ಕೊಟ್ಟ ಕಣ್ ದಣಿವ ತನಕ... ಕೇಳು ಕೇಳುತಲಿರುವೆ ಹರಿ ನಿನ್ನ ಸುರ ಗಾನ ನೀ ನನಗೆ ಕೊಟ್ಟ ಮನ ತಣಿವ ತನಕ... ಆಡು ಆಡಲಿ ನಿನ್ನ ನೀಳ ಬೆರಳಿನ ಲೀಲೆ ಕೊಳಲ ಮೇಲೆ ದೇವ ಲೋಕದ ಗಾನ ಸುಳಿದು ತೇ...
ಕಾದು ಕಾದು ಕಾದು ನೋಡುತ್ತಿದ್ದೆ ನಿನ್ನ...ಇತ್ತು ಗೆಳೆಯ ಅಂದು ಕಣ್ಣಲ್ಲಿ ಮಿಂಚು ನೂರು;ನೀನು ಬರುವ ದಾರಿ ಕಾಯುತಿಹೆನು ಇಂದು...ಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು -ಮಾಲು
ಪ್ರಿಯಾ, ನೀನು ಗೀಚಿದ್ದೆ... ಪತಿವ್ರತೆ: ಮಂಡೋದರಿ, ತಾರ, ಸೀತೆ... ಆದರೆ ಅಲ್ಲಿ ನನ್ನೇಕೆ ಮರೆತೆ? - ಮಾಲು
ವಿವ್ಹಲ ಚಂದ್ರನಿಲ್ಲದ ಇರುಳು ಮೋಡ ಮುಸುಕಿದ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಹಾಳು ಸುರಿದಿದೆ ಮಂಚ ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ -ಮಾಲು
ನನ್ನ ನಿನ್ನ ಒಲುಮೆಗೆಂದು ಹೂವ ಕೊಟ್ಟೆಯ! ಸೋಕಿದೊಡನೆ ಜುಮ್ಮೆನ್ನುವ ನಿನ್ನ ಕೈಯ್ಯನ್ನು ನನ್ನ ಕಯ್ಯಲಿಟ್ಟೆಯ! ನನ್ನ ನೆನಪಿನಲ್ಲಿ ಸದಾ ಇರಲು ನೀನು ನಿನ್ನ ನೆರಳನಿಲ್ಲಿ, ಗೆಳೆಯ ಮರೆತು ಹೊರಟೆಯ! -ಮಾಲು
ಎದೆಗೆ ಎದೆಯು ಒಲಿದು ಬೆಸೆದ ನನ್ನ ಇವನ ಪ್ರೇಮ ಉರಿವ ಧೂಪದಿಂದ ಬಂದ ಘಮ್ಮೆನ್ನುವ ಧೂಮ! ಮಾತಿಗಿಂತ ಮುತ್ತು ಹಿರಿದು ಎಂಬುವುದು ನಮ್ಮ ನಿಯಮ! ತುಟಿಗೆ ತುಟಿಯ ಬೆರೆಸುವುದೇ ದಿನ ನಿತ್ಯದ ನೇಮ! ಕಳೆದ ನಿನ್ನೆ ಬರುವ ನಾಳೆ ನಮಗಿಲ್ಲ ಅದರ ಚಿಂತೆ ಇಂದು...
ಹುಡುಗಾ, ಶುಕ ಕಾಕ ಕೋಕ ಕುಣಿದಿವೆ ಮರದಲಿ ಹಾಕಿವೆ ಖುಶಿಯಲಿ ಕೇಕೆ! ನನ್ನ ನಿನ್ನ ನಾಳೆಯ ಮಿಲನ ತಿಳಿಯಿತು ಅವಕೂ ಏಕೆ?! -ಮಾಲು
ಹುಡುಗಾ, ಯಾವ ರಾಧೆಯು ಇಲ್ಲ ಯಾವ ಸೀತೆಯು ಇಲ್ಲ ಇಲ್ಲಿ! ಹಾಗೆಯೇ.....ಇಲ್ಲ ಆ ಶ್ರೀರಾಮ ಹಾಗು ಮುರಳಿ! ಅವರಂಥವರು ನಮಗೆ ಬೇಕಿದ್ದರೆ ಹೋಗಬೇಕಾದೀತು ನಾವು ತ್ರೇತಾ ಮತ್ತು ದ್ವಾಪರಕ್ಕೆ ಮರಳಿ! -ಮಾಲು
ನನಗೂ ಒಬ್ಬಳು ಸವತಿ ಇದ್ದಾಳೆ ! ನಿಮಗೆ ಹೇಳಲೇನು?! ಅವಳೇ... ಇವನ ಕೆನ್ನೆಗೆ ಕಚ್ಚಿಕೊಂಡೇ ಇರುವ ಮೊಬೈಲ್ ಫೋನು! -ಮಾಲು
ಗೆಳೆಯಾ, ಹಸಿ ಹಸಿಯಾದ ಹರಯ ಕುಡಿಸಿತ್ತು ನನಗೆ ಸುರೆಯ! ನಾ ಹಿಡಿದಿದ್ದೆ ನಿದಿರೆ ಜಾಡು ಅಲ್ಲಿ ಕಟ್ಟು ಪಾಡು ಇರದ ಕಾಡು! ಬಲಿತ ಮರದಂತೆ ನಿಂತಿದ್ದೆ ನೀನು ಬಳಸಿ ತಬ್ಬಿದ್ದೆ, ಬಳ್ಳಿ ನಾನು! ಇರುಳಲ್ಲಿ ಕಂಡ ಕನಸು ನಿಜವಾಗಲೆಂದು ಹರಸು! -ಮಾಲು
ಗೆಳೆಯ, ನೀ ಬರುವೆಯೆಂದೆ, ಬರದೆ ಹೋದೆ ಬದುಕೆ ಬರಿ ಹುಸಿಯಾಗಿದೆ... ಜೊತೆ ಇಲ್ಲದೆ ಬಾಳೆಲ್ಲಿದೆ? ನೀನಿಲ್ಲದೆ... ನೋವ ತೋರುತ ಕಂಗಳಿಂದು ಬಿಡದೆ ಬಿಸಿ ನೀರಾಡಿದೆ... -ಮಾಲು
ಗೆಳೆಯಾ, ಚೆಲುವೀ ಹೆಣ್ಣಲಿ ಎದೆಯೊಳ ಮಣ್ಣಲಿ ಒಲವಿನ ಗಿಡವನು ನೆಟ್ಟೆ ; ಬೇರದು ಇಳಿದು ಚಿಗುರನು ಒಡೆದು ಹೂವನು ಬಿಡುವ ಮೊದಲೆ ನೀ ನೀರನೆ ಎರೆವುದ ಬಿಟ್ಟೆ -ಮಾಲು