ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Maalu
M

Maalu

೧೭೦ ಲೇಖನಗಳು ೮೯,೮೪೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಾಲು ಕವಿತೆಗಳು - ೪

ಏಪ್ರಿಲ್ ೨೫ ಕವನ ೩೬೫ ವೀಕ್ಷಣೆ

ಮಾನಿನಿ... ಚಿಗುರೆಗಿರುವ ಚೆಂದ ಹಗುರ ಹೂವ ಗಂಧ ಬಿಗಿದು ಎದುರು ನಿಂದ ಮುಗುದೆ ಇವಳು ಗೆಳೆಯ! ಮರೆಯದಂಥವಳು ಹೆರಳ ಕುಣಿಸುತಿರಲು ಮರುಕಳಿಸದೆ ಮತ್ತೆ ನಿನ್ನ ಮರೆತು ಹೋದ ಹರೆಯ! -ಮಾಲು

ಮಾಲು ಕವಿತೆಗಳು - ೩

ಏಪ್ರಿಲ್ ೨೫ ಕವನ ೩೯೩ ವೀಕ್ಷಣೆ

ಮಾಲು ಕವಿತೆಗಳು - ೩ ಹುಡುಗಾ, ದೀಪ ಹಚ್ಚಿ ತಂದೆ ನಿನ್ನ ರೂಪ ನೋಡಲೆಂದೆ... ನೀ ರತಿಗೆ ತಕ್ಕ ಮಾರ ಬೊಗಸೆ ಹೂಗೆ ಸಿಕ್ಕ ದಾರ ಜೊತೆಗೆ ಸೇರೆ ಒಂದು ಹಾರ... ಸಗ್ಗ ಇಳೆಗೆ ಇಳಿಯಲಿಂದೆ ಆನಂದ ಪಡೆವೆನೆಂದೆ ನಿನ್ನ ಅಂಗ ಸಂಗದಿಂದೆ... ! -ಮಾಲು

ಮಾಲು ಕವಿತೆಗಳು -೨ ...

ಏಪ್ರಿಲ್ ೨೩ ಕವನ ೩೫೭ ವೀಕ್ಷಣೆ

ಮಾಲು ಕವಿತೆಗಳು - ಹುಡುಗಾ, ನಿನ್ನ ನೆನಪೆಂದರೆ ಘಮ್ಮೆನುವ ಮೊಲ್ಲೆ ಮರುಗ ದವನ...! ಸುಡು ಬೇಸಿಗೆ ಧಗೆ ದೂಡುವ ಸುಳಿವ ತಂಪು ಪವನ! -ಮಾಲು

ಮಾಲು ಕವಿತೆಗಳು...

ಏಪ್ರಿಲ್ ೨೩ ಕವನ ೪೦೮ ವೀಕ್ಷಣೆ

ಮಾಲು ಕವಿತೆಗಳು.. ನಿನ್ನ ನೆನಪೆಂದರೆ ಹುಡುಗಾ, ನವಿಲು ಗರಿಯ ನವಿರು ಮಯ್ಯ ಮುಟ್ಟುವಂಥದು...! ಹಚ್ಚ ಹಸಿರ ಹಾಸಿನಲ್ಲಿ ಅಂಕೆಯಿರದೆ ತಿರುಗುತಿರುವ ಜಿಂಕೆ ಮರಿಯ ಬೆನ್ನ ಮೇಲೆ ಮೆಲ್ಲನೊಮ್ಮೆ ಕೈಯನಿಟ್ಟು ತಟ್ಟು ವಂಥದು...! -ಮಾಲು

ಹನಿಗಳು...

ಏಪ್ರಿಲ್ ೧೭ ಕವನ ೫೧೮ ವೀಕ್ಷಣೆ

ಹನಿಗಳು... -೧- ನನ್ನ ಮೇಲೆ ಕಣ್ಣಿಟ್ಟವರುಇಲ್ಲಿ ಬಹಳ... ಆದರೆ ನನ್ನ ಕಣ್ಣಲ್ಲಿ ಕಣ್ಣಿಟ್ಟವರುಬಹಳ ವಿರಳ... ***** -೨- ಹುಡುಗರೆಂದರೆ ಕೆಲವು ಹುಡುಗಿಯರಿಗೆ cash ಕರೆಯುವ cowವು ಗಳು...!ಬೇಕೆಂದಾಗ ಅಂಗೈಯ್ಯಲ್ಲಿ ಬಂದು ಕೂಡುವ doveವುಗಳು...!...

ದುಮ್ಮಾನ...

ಏಪ್ರಿಲ್ ೧೫ ಕವನ ೩೪೭ ವೀಕ್ಷಣೆ

ದುಮ್ಮಾನ... ಚಂದ್ರನಿಲ್ಲದ ಇರುಳು ಮೋಡ ಮುಸುಕಿದೆ ಮುಗಿಲು ಮಿಣುಕು ತಾರೆಯ ಕೊಂಚ ಬೆಳಕು ಇಲ್ಲ... ಮನದಿ ಹುದುಗಿದೆ ದಿಗಿಲು ಕೊರಳ ಬಿಗಿದಿದೆ ಅಳಲು ಗೆಳೆಯನಿಲ್ಲದ ಬಾಳು ಬಾಳೆ ಅಲ್ಲ... -ಮಾಲು

ಯುಗಾದಿ...

ಏಪ್ರಿಲ್ ೧೦ ಕವನ ೧,೦೩೦ ವೀಕ್ಷಣೆ

ಯುಗಾದಿ... ಮತ್ತೆ ಬಂದಿದೆ ಯುಗಾದಿ ತೆರೆಯಿತು ಹೊಸ ವರುಷದ ಹಾದಿ... ನೀಲಾಂಬರದಲಿ ಸೂರ್ಯನ ಉಗಮ ನವೋತ್ಸಾಹದ ಬೆಳಗು ಮನೆಯಂಗಳದಲಿ ರಂಗೋಲೆಯ ನಗು ಹರುಷ ತುಂಬಿದೆ ಒಳಗೂ... ಮಾಮರ ವನದಲಿ ಕೋಕಿಲ ಕುಕಿಲು ಚೈತ್ರವೆ ಜೀವದ ಉಸಿರು... ಮಾನವ ಮನದಲಿ ಕತ್ತ...

ಚುಪ್ಪಾ ಚೂರುಗಳು...

ಏಪ್ರಿಲ್ ೧೦ ಕವನ ೩೬೨ ವೀಕ್ಷಣೆ

ಚುಪ್ಪಾ ಚೂರುಗಳು... -೧- ನನಗೆ ಸಂಬಳ ಬಂದಾಗ ನಗ ಬೇಕು ಎನ್ನುತ್ತಾನೆ... ನಾನು ಬಿದ್ದು ಬಿದ್ದು ನಗುತ್ತೇನೆ! ******************** -೨- 'ದುಡ್ಡಿಗೆ ನಿನ್ನ ಬಳಿ ಬೇಡ ಬೇಕೆ?' ಎನ್ನುತ್ತಾನೆ'... ನಾನು ಬೇಡ ಎನ್ನುತ್ತೇನೆ! **************...

ಕಾಮ(ನೆ)

ಏಪ್ರಿಲ್ ೦೯ ಕವನ ೧,೨೫೪ ವೀಕ್ಷಣೆ

ಕಾಮ(ನೆ)... ಹುಡುಗಾ ನೀನು ಬರೆವ ಕವಿತೆ ಓದಲು ಸುಲಭ... ಏಕೆಂದರೆ ಅದರಲ್ಲಿ ಬರೀ ಕಾಮ(ನೆ) ತುಂಬಿರುತ್ತದೆ,,,! -ಮಾಲು

ದಾಹ...

ಏಪ್ರಿಲ್ ೦೯ ಕವನ ೪೮೧ ವೀಕ್ಷಣೆ

ದಾಹ... ಹುಡುಗಾ,ಹಲವರಿಗೆ ಸುಡು ಬೇಸಿಗೆಯಲ್ಲಿ ಕಾವೇರಿ ನೀರು ಬೇಕು... ನನಗೆ ಸುಡು ಬೇಸಿಗೆಯ ಇರುಳಲ್ಲಿ ಪ್ರೀತಿಯ ಕಾವೇರಿ ನೀನು ಬೇಕು...! -ಮಾಲು

ಹನಿ...

ಏಪ್ರಿಲ್ ೦೮ ಕವನ ೪೪೯ ವೀಕ್ಷಣೆ

ಹನಿ... "ಪ್ರಿಯೆ, ನೀನು ಬಾನಲ್ಲಿ ಹಕ್ಕಿ ಆಗಬೇಕಿತ್ತು ಚಿಕ್ಕೆ ಆಗಬೇಕಿತ್ತು..." "ಪ್ರಿಯ, ಸ್ವಲ್ಪ ಹೊತ್ತಿನ ಮೊದಲು ಹಕ್ಕಿಯೂ ಆಗಿದ್ದೆ... ಚಿಕ್ಕೆಯೂ ಆಗಿದ್ದೆ...! ಬಂದಿದ್ದೇನೆ ಈಗ ಇಲ್ಲಿಗೆ... ಏಕೆಂದರೆ... ಅಡುಗೆ ಮಾಡುವುದಕ್ಕೆ ಕುಕ್ಕರ್ ಪ...

ಹನಿಗಳು...

ಏಪ್ರಿಲ್ ೦೭ ಕವನ ೫೭೩ ವೀಕ್ಷಣೆ

-೧- ಅವನು ಒಳ್ಳೆಯವರ ಮಗನಾಗಿರಬೇಕೆಂದು ನಮ್ಮಮ್ಮನ ಆಸೆ... ಅವನು ಒಳ್ಳೆಯ ವರನಾಗಿರಬೇಕೆಂದು ನನ್ನ ಆಸೆ... *************** -೨- ಅವನು ತುಂಬಾ ರೂಪಾಯಿ ಇರುವಂಥವನೇ ಆಗಿರಬೇಕು ಎಂದು ನನ್ನ ಅಪ್ಪನ ಆಸೆ... ಅವನು ತುಂಬಾ ರೂಪ ಇರುವಂಥವನೇ ಆಗಿರಬೇಕ...