ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಫೆಬ್ರ ೧೬ ಉಲ್ಲೇಖಗಳು ೪೭೯ ವೀಕ್ಷಣೆ

ಹೂವಿನ ಆಡಂಬರವನ್ನು ಕಂಡು ಒಳ್ಳೆಯ ಹಣ್ಣು ದೊರೆಯುವುದೆಂಬ ಆಸೆಯಿಂದ, ಮಾವಿನ ತೋಪನ್ನು ಕಡಿದು ಮುತ್ತುಗದ ಮರಗಳನ್ನು ಬೆಳೆಸಿ ನೀರೆರೆದರೆ ಏನಾಗುವುದು? ಫಲಪ್ರಾಪ್ತಿಯ ಕಾಲದಲ್ಲಿ ಹಣ್ಣಿಲ್ಲವೆಂದು ವ್ಯಥೆ ಪಡಬೇಕಾಗುವುದು.

ನುಡಿಮುತ್ತು

ಫೆಬ್ರ ೧೬ ಉಲ್ಲೇಖಗಳು ೪೮೫ ವೀಕ್ಷಣೆ

ಎಲ್ಲಾ ಧರ್ಮಗಳೂ ಸತ್ಯ , ಹಾಗೆಯೇ ಎಲ್ಲ ಧರ್ಮಗಳಲ್ಲೂ ಕೆಲವು ದೋಷಗಳಿವೆ. ಹಿಂದು ಧರ್ಮವು ನನಗೆ ಎಷ್ಟು ಪ್ರಿಯವೋ ಉಳಿದ ಧರ್ಮಗಳೂ ಅಷ್ಟೇ ಪ್ರಿಯ. ಆದ್ದರಿಂದ ಮತಾಂತರ ಸಿದ್ದಾಂತವನ್ನು ನಾನು ಒಪ್ಪುವುದಿಲ್ಲ.

ನುಡಿಮುತ್ತು

ಫೆಬ್ರ ೧೬ ಉಲ್ಲೇಖಗಳು ೭೮೧ ವೀಕ್ಷಣೆ

ಮತವೆಂದರೆ ದೇವರನ್ನು ಕುರಿತ ನಂಬಿಕೆ ಮತ್ತು ಆ ನಂಬಿಕೆಗೆ ಅನುಸಾರವಾದ ನಡವಳಿಕೆ. ಈ ಮತವೆಂಬ ಮನೋಭಾವ ಇಲ್ಲದಿರುವ ಜನವೇ ಲೋಕದಲ್ಲಿಲ್ಲ.

ನುಡಿಮುತ್ತು

ಫೆಬ್ರ ೧೬ ಉಲ್ಲೇಖಗಳು ೪೦೪ ವೀಕ್ಷಣೆ

ಎಲ್ಲ ಬಲ್ಲವಳೆಂಬ ಇಲ್ಲವದು ಭ್ರಮೆ ಎನಗೆ; ಬಲ್ಲವರ ಪಾದ ಹಿಡಿಯುವೆ, ಬಲ್ಲಿದರು ಕಲಿಸಿರಿ ಮತ್ತು ನುಡಿಸಿರಿ.

ನುಡಿಮುತ್ತು

ಫೆಬ್ರ ೧೬ ಉಲ್ಲೇಖಗಳು ೩೭೩ ವೀಕ್ಷಣೆ

ಸಾಧಕಬಾಧಕಗಳನ್ನು ನಿಶ್ಚಯಿಸಿ ಉದ್ಯೋಗವನ್ನು ನಡೆಸಬೇಕು. ಗುಣವಿದ್ದರೆ ಸಂಗ್ರಹಿಸಬೇಕು, ದೋಷವಿದ್ದರೆ ಬಿಡಬೇಕು.

ನುಡಿಮುತ್ತು

ಫೆಬ್ರ ೧೫ ಉಲ್ಲೇಖಗಳು ೩೯೫ ವೀಕ್ಷಣೆ

ಮನಸ್ಸನ್ನು ಹೆಚ್ಚಾಗಿ ದೋಷದ ಕಡೆಗೆ ತಿರುಗಿಸುವುದು ಒಳ್ಲೆಯದಲ್ಲ, ದೋಷವಿಲ್ಲದಿದ್ದರೂ ಅದೇ ಮನಸ್ಸುಳ್ಳವರಿಗೆ ದೋಷವು ತೋರುತ್ತದೆ.

ನುಡಿಮುತ್ತು

ಫೆಬ್ರ ೧೫ ಉಲ್ಲೇಖಗಳು ೪೩೩ ವೀಕ್ಷಣೆ

ನಾವು ನಮ್ಮ ಬೂಟಾಟಿಕೆಗಳನ್ನು ಎಷ್ಟೇ ಮುಚ್ಚಿಟ್ಟುಕೊಂಡರೂ ಪ್ರಕೃತಿ ಅದನ್ನು ಬಿಚ್ಚಿಡುತ್ತದೆ.

ನುಡಿಮುತ್ತು

ಫೆಬ್ರ ೧೫ ಉಲ್ಲೇಖಗಳು ೪೧೪ ವೀಕ್ಷಣೆ

ಸಾಹಿತ್ಯ ಸೋತರೂ ಸಂಗೀತ ಸೋಲುವುದಿಲ್ಲ. ಸಾಹಿತ್ಯದ ಮೂಲಕ ಸಾಧಿಸಲಾಗದೇ ಇರುವುದನ್ನು ಸಂಗೀತದಿಂದ ಸಾಧಿಸಬಹುದು. ಕೆಲ ವಿಷಯಗಳಲ್ಲಿ ಸಾಹಿತ್ಯ ಸೋಲುತ್ತದೆ. ಆದರೆ ಸಂಗೀತ ಎಂದೂ ಸೋಲುವುದಿಲ್ಲ.

ನುಡಿಮುತ್ತು

ಫೆಬ್ರ ೧೫ ಉಲ್ಲೇಖಗಳು ೩೭೮ ವೀಕ್ಷಣೆ

ಪತ್ರಕರ್ತರು ವರ್ತಮಾನದ ಗುಲಾಮರಾಗಿ ಚರಿತ್ರೆಯನ್ನು ಮರೆಯುವುದು ಹಾಗೂ ರೋಚಕತೆಯ ಗುಲಾಮರಾಗಿ ವಾಸ್ತವವನ್ನು ಮರೆಯುವುದು ಅಪಾಯಕಾರಿ.

ನುಡಿಮುತ್ತು

ಫೆಬ್ರ ೧೪ ಉಲ್ಲೇಖಗಳು ೪೬೧ ವೀಕ್ಷಣೆ

ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.

ನುಡಿಮುತ್ತು

ಫೆಬ್ರ ೧೪ ಉಲ್ಲೇಖಗಳು ೩೫೭ ವೀಕ್ಷಣೆ

ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.

ನುಡಿಮುತ್ತು

ಫೆಬ್ರ ೧೩ ಉಲ್ಲೇಖಗಳು ೩೫೮ ವೀಕ್ಷಣೆ

ಸಂಗೀತ ಆತ್ಮದ ಔಷಧಿಯಿದ್ದಂತೆ, ಆತ್ಮದ ಅಶಾಂತಿಯನ್ನು ಕಳೆದು ಶಾಂತಿಯನ್ನು ದಯಪಾಲಿಸುತ್ತದೆ.