ನುಡಿಮುತ್ತು
ಪ್ರಜಾಪ್ರಭುತ್ವಗಳು ಅತಿ ವೈಭವದಿಂದಲೂ, ರಾಜ ಪ್ರಭುತ್ವಗಳು ಬಡತನದಿಂದಲೂ ನಾಶವಾಗುತ್ತವೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಪ್ರಜಾಪ್ರಭುತ್ವಗಳು ಅತಿ ವೈಭವದಿಂದಲೂ, ರಾಜ ಪ್ರಭುತ್ವಗಳು ಬಡತನದಿಂದಲೂ ನಾಶವಾಗುತ್ತವೆ.
ಈ ದೇಶದ ಭವಿಷ್ಯ ದೇಶಭಕ್ತರೆಂಬ ದರೋಡೆಕೋರರಿಗೇ ಮೀಸಲಾದದ್ದು. ಇವರಲ್ಲಿ ಯಾವ ತೆರನ ದರೋಡೆಕೋರರ ಗುಂಪು ಮುಂದೆ ಬರುತ್ತದೆ ಎಂದು ಹೇಳುವುದು ಕಷ್ಟ.
ಅನ್ಯರು ತಪ್ಪು ಕಂಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆಂಬ ಹಠವಾದಿ ಯಾವುದೊಂದನ್ನೂ ಮಾಡಲಾರ.
ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಹಕ್ಕಿಯ ಬಾಲದಲ್ಲಿ ಬೆಂಕಿಯಿದ್ದರೆ, ಎಲ್ಲಿ ಹಾರಿದರೂ ಅಪಾಯದಿಂದ ತಪ್ಪಿಸಿಕೊಳ್ಳಲಾರದು.
ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ; ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.
ಮಾತೃಭಾಷೆಯಲ್ಲಿ ಓದಲು ಬರೆಯಲು ಬಾರದವರು ಬದುಕಿ ಉಳಿದಾರೆಯೇ ನುಡಿಯಿಲ್ಲದ ನಾಡು ಕೊರಡು. ನುಡಿಯೇ ನಾಡಿನ ನಾಡಿ.
ನಮ್ಮ ಶಕ್ತಿ ಚದುರಂಗದಂತೆ. ನೋಡಿಕೊಂಡು ಏಕಾಗ್ರತೆಯಿಂದ ಕೆಲಸ ಮಾಡಿದರೆ ಗೆಲುವು ಹತ್ತಿರವಾಗುತ್ತದೆ.
ಸವಾಲುಗಳನ್ನು ಸ್ವಾಗತಿಸಿ ಜಾಣತನದಿಂದ ಕಲಿಯಲು ಮತ್ತು ಬೆಳೆಯಲು ಪ್ರತಿಯೊಂದು ಸನ್ನಿವೇಶದಲ್ಲೂ ಅವಕಾಶಕ್ಕಾಗಿ ಎದುರು ನೋಡುತ್ತಿರಿ.
ಪ್ರಕೃತಿ ನಿಯಮ ನ್ಯಾಯವಾದುದಷ್ಟೇ ಅಲ್ಲ , ಭಯಂಕರವೂ ಹೌದು. ಅದರಲ್ಲಿ ದುರ್ಬಲ ದಯೆ ಇರುವುದಿಲ್ಲ.
ಮಾನವರ ಬಗ್ಗೆ ಮಂಗಳಕರ ಹಾಗೂ ದಯೆಯ ಭಾವನೆ ಹೊಂದುವುದು ವಾಸ್ತವಿಕ ಧರ್ಮ.
ಕೆಲಸವೊಂದು ಸುಂದರವಾಗಿ ಮುಗಿಯಬೇಕೆಂದಿದ್ದರೆ ಆ ಕೆಲಸವನ್ನು ಸ್ವತಃ ಮಾಡುವುದೊಳ್ಳೆಯದು.