ನುಡಿಮುತ್ತು
ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು, ಅದರಲ್ಲಿ ಮುಳುಗುವುದು ಆತ್ಮಹತ್ಯೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು, ಅದರಲ್ಲಿ ಮುಳುಗುವುದು ಆತ್ಮಹತ್ಯೆ.
ಮನುಷ್ಯ ಸೌಹಾರ್ದಯುತವಾಗಿ ಜೀವನ ನಡೆಸುವುದಕ್ಕಿಂತ ಅಧಿಕ ಸಂತೋಷದ ವಿಚಾರ ಇರಲು ಸಾಧ್ಯವಿಲ್ಲ.
ನಿರಾಸೆ ಎನ್ನುವುದು ದೇಹಕ್ಕೆ ಲಕ್ವ ಹೊಡೆದಂತೆ, ಬುದ್ದಿಯನ್ನು ಮಂಕಾಗಿಸುತ್ತದೆ.
ಒಂದು ವಿಷಯ ತಿಳಿಯದಿರುವಾಗ ತಿಳಿದಿಲ್ಲ ಎಂದೂ ತಿಳಿದಿರುವಾಗ ತಿಳಿದಿದೆ ಎಂದೂ ಒಪ್ಪಿಕೊಳ್ಳುವುದೇ ವಿದ್ಯೆ.
ವೇದಗಳು,ಬೈಬಲ್, ಕುರಾನ್ ಎಲ್ಲಿ ಇಲ್ಲವೋ ಅಲ್ಲಿಗೆ ಮಾನವ ವರ್ಗವನ್ನು ಕರೆದೊಯ್ಯಬೇಕು. ಆದರೆ ಅದನ್ನು ವೇದ, ಬೈಬಲ್, ಕುರಾನ್ ಐಕ್ಯತೆಯಿಂದಲೇ ಸಾಧಿಸಬೇಕಾಗಿದೆ.
ದೇವತೆಗಳು ಯಾವ ಮನುಷ್ಯನಿಗೆ ಸೋಲು ಸಂಭವಿಸಲೆಂದು ಇಚ್ಛಿಸುತ್ತಾರೋ, ಅವರ ಬುದ್ದಿಯನ್ನು ಎಳೆದುಕೊಂಡು ಬಿಡುತ್ತಾರೆ. ಆತನು ಎಲ್ಲವನ್ನೂ ತಲೆಕೆಳಗಾಗಿ ನೋಡುತ್ತಾನೆ.
ಪ್ರವಾಹದ ವೇಗದಿಂದ ಮರಳಿನ ರಾಶಿ ಕೊಚ್ಚಿ ಹೋಗುತ್ತದೆ. ಮತ್ತೆ ಒಂದು ಕಡೆ ಸೇರುತ್ತದೆ. ಹಾಗೆ ಕಾಲಮಹಿಮೆಯಿಂದ ಜನರು ಒಂದೆಡೆ ಸೇರುತ್ತಾರೆ ಮತ್ತೆ ಅಗಲುತ್ತಾರೆ.
ಮನುಷ್ಯ ಎಷ್ಟು ದೂರ ಕೈಯನ್ನು ಚಾಚುವುದು ಸಾಧ್ಯವೋ ಅಷ್ಟು ದೂರವೂ ಚಾಚಿ ಪ್ರಯತ್ನಿಸುವುದು ಅವನ ಕರ್ತವ್ಯ . ಎಲ್ಲಿ ಅವನ ಕೈ ಸಾಗದೋ-ಅಲ್ಲಿ ಬಂದದ್ದನ್ನು ಭಗವದಿಚ್ಚೆಯೆಂದು ಅಂಗೀಕರಿಸುವುದೂ ಅವನ ಕರ್ತವ್ಯ.
ಖುಷಿ ಮನುಷ್ಯ ಹಾಗೂ ಶುದ್ದ ಹೃದಯದ ಮನುಷ್ಯನ ಕೆಲಸ ಎಂದಿಗೂ ನಿಲ್ಲುವುದಿಲ್ಲ.