ನುಡಿಮುತ್ತು
ಧರ್ಮ ವ್ಯಾಪಾರವಲ್ಲ, ಅದೊಂದು ಮನೋಧರ್ಮ. ಅದರಲ್ಲಿ ಬಲವಾದ ನಂಬಿಕೆ ಇದ್ದಾಗ ಪ್ರಯೋಜನ ಆಗಬಹುದು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಧರ್ಮ ವ್ಯಾಪಾರವಲ್ಲ, ಅದೊಂದು ಮನೋಧರ್ಮ. ಅದರಲ್ಲಿ ಬಲವಾದ ನಂಬಿಕೆ ಇದ್ದಾಗ ಪ್ರಯೋಜನ ಆಗಬಹುದು.
ಮನುಷ್ಯ ಒತ್ತಡದಲ್ಲಿದ್ದಾಗ ಮಾಡುವ ಆಯ್ಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ.
ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ ಬೇಸರ ತರಿಸುತ್ತಾರೆ. ಕೇಳುಗರ ಶಕ್ತಿ ತುಂಬಾ ನಾಜೂಕಾದದ್ದು. ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ.
ಮನುಷ್ಯನು ತಾನು ಮಾಡಿದ ಅಧರ್ಮವನ್ನು ಕುರಿತು ಮುಕ್ತವಾಗಿ ಹೇಳಿಕೊಂಡಂತೆಲ್ಲಾ, ಹಾವು ಪೊರೆಯಿಂದ ಬಿಡುಗಡೆ ಹೊಂದುವಂತೆ -ಅಧರ್ಮದ ಪಾಪದಿಂದ ಬಿಡುಗಡೆ ಹೊಂದುತ್ತಾನೆ.
ಉರವಲಿನಲ್ಲಿ ಬೆಂಕಿ ಇರುವುದನ್ನು ತಿಳಿದವನು ಜ್ಞಾನಿ; ಆ ಬೆಂಕಿಯನ್ನು ಬಳಸಿಕೊಂಡು ಅಡುಗೆ ತಯಾರಿಸಿದವನು ವಿಜ್ಞಾನಿ.
ಪ್ರೀತಿ, ಕರುಣೆ, ಸ್ನೇಹ, ಮರುಕ- ಇವೇ ನಮ್ಮ ದೇವರು. ಇಲ್ಲಿ ಇಲ್ಲ-ಜಾತಿಗೀತಿ, ಇಲ್ಲಿ ಇರುವುದೊಂದೆ ಪ್ರೀತಿ.
ಬಹುಜನ ಮಾಡಿದುದೆ ಪಾಪವಾದರೂ ಪುಣ್ಯ! ಬಹುಜನರು ಸೇರಿದುದೆ ನರಕವಾದರೂ ಸ್ವರ್ಗ!
ಪ್ರತಿಯೊಬ್ಬ ಮನುಷ್ಯ 'ತಾನಾಗಿರುವ' ಅವಕಾಶ ಕಲ್ಪಿಸುವುದೇ ಪ್ರಜಾಪ್ರಭುತ್ವದ ಮೊದಲ ದೊಡ್ಡ ಗುರಿ.