ನುಡಿಮುತ್ತುಗಳು
ನುಡಿಮುತ್ತು
ಕತ್ತಲು ರಾತ್ರಿಯ ಅತಿಥಿ ಮಾತ್ರ. ಬೆಳಗನ್ನು ಯಾರಿಂದ ತಾನೇ ತಡೆಯಲಾದೀತು.
ನುಡಿಮುತ್ತು
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ , ಸತಿ ಪತಿಗಳೊಂದಾಗದ ಭಕ್ತಿ ಅಮೃತದೊಳು ವಿಷ ಬೆರೆತಂತೆ ಕಾಣಾ! ರಾಮನಾಥ
ನುಡಿಮುತ್ತು
ಒಂದು ಒಳ್ಳೆಯ ಪುಸ್ತಕ ಕಷ್ಟಕಾಲದಲ್ಲಿ ಸ್ನೇಹಿತನಾಗುತ್ತದೆ. ಸಮಷ್ಟಿಗಳಿಗೆ ಪರಿಹಾರ ಹೇಳುತ್ತದೆ. ಏಕಾಕಿತನ ಭಾರವನ್ನು ಕಡಿಮೆ ಮಾಡುತ್ತದೆ.
ನುಡಿಮುತ್ತು
ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ.
ನುಡಿಮುತ್ತು
ಕೂಗಾಡುವುದು ಹೆಚ್ಚು ಮಂದಿಗೆ ಬರುತ್ತದೆ. ಆದರೆ, ಮಾತನಾಡುವ ಕಲೆ ಕೆಲವರಿಗೆ ಮಾತ್ರ ಬರುತ್ತದೆ.
ನುಡಿಮುತ್ತು
ನಗುವು ಸಾವನ್ನು ಮುಂದೂಡುತ್ತದೆ; ಆದುದರಿಂದ ಮನುಷ್ಯ ನಕ್ಕು ನಲಿಯುವುದನ್ನು ಕಲಿಯಬೇಕು.
ನುಡಿಮುತ್ತು
ಮೃಗಗಳಲ್ಲಿ ಸಿಂಹಕ್ಕೆ ಗಣ್ಯ ಸ್ಥಾನವುಂಟು.ಅದೇ ರೀತಿಯಲ್ಲಿ ಮನುಷ್ಯನಾದವನು ಗಣ್ಯನೆಂದೆನಿಸಿಕೊಳ್ಳಬೇಕಾದರೆ ಅವನೊಬ್ಬ ಶ್ರೇಷ್ಠ ಚಿಂತಕನಾಗಿರಬೇಕು.