ನುಡಿಮುತ್ತುಗಳು
ನುಡಿಮುತ್ತು
ಸ್ವಾರ್ಥವನ್ನು ಗೆದ್ದವನು,ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜಕ್ಕೂ ಸುಖಿ.
ನುಡಿಮುತ್ತು
ನಿಸ್ವಾರ್ಥ ಪ್ರೇಮ ನಿಮಗೆ ಉಲ್ಲಾಸವನ್ನು ಉತ್ತೇಜನವನ್ನು ಕೊಡುತ್ತದೆ. ವಿಶ್ವಾಸ ಗಳಿಸದ ಬದುಕು ವ್ಯರ್ಥ.
ನುಡಿಮುತ್ತು
ನಾಳೇಯೇ ಜಗತ್ತಿಗೆ ಪ್ರಳಯ ಎಂದು ಗೊತ್ತಾಗಿ, ಮನುಷ್ಯ ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ತೊರೆದು ಹತಾಶನಾದರೂ, ಭೂಮಿಯಲ್ಲಿ ಒಂದು ಸಸ್ಯವನ್ನು ನೆಡಬೇಕು.
ನುಡಿಮುತ್ತು
ಪರಿಶುದ್ದ ಹೃದಯವಿಲ್ಲದ ಗಂಡಾಗಲೀ ಹೆಣ್ಣಾಗಲೀ ಪರಮಾತ್ಮನ ಸಾನಿಧ್ಯ ಹೊಂದಲು ಅರ್ಹರಲ್ಲ.
ನುಡಿಮುತ್ತು
ಕೆನ್ನೆಗೆ ಹೊಡೆದರೆ ಕ್ಷಮೆ ಇದೆ, ಬೆನ್ನಿಗೆ ಹೊಡೆದರೆ ಕ್ಷಮೆ ಇದೆ; ಆದರೆ ಹೊಟ್ಟೆಗೆ ಹೊಡೆದರೆ ದೇವರೂ ಕ್ಷಮಿಸಲಾರ.
ನುಡಿಮುತ್ತು
ಆಕಳಿಸುತ್ತ ಕೆಲಸ ಮಾಡುವವನ ಕೈ ಬಡತನ ತರುತ್ತದೆ; ಆದರೆ ಆಸಕ್ತಿ ವಹಿಸಿ ಕೆಲಸ ಮಾಡುವವನ ಕೈ ಸಿರಿತನ ತರುತ್ತದೆ.
ನುಡಿಮುತ್ತು
ಮಕ್ಕಳಿಗೆ ಪ್ರೀತಿ ತೋರಿಸಿ, ಅದು ಹತ್ತು ಪಟ್ಟಾಗಿ ನಿಮಗೆ ಹಿಂತಿರುಗುತ್ತದೆ.
ನುಡಿಮುತ್ತು
ಮಕ್ಕಳು ತಮ್ಮ ಪೋಷಕರನ್ನು ಪ್ರೀತಿಸುತ್ತಾ ಜೀವನ ಆರಂಭಿಸುತ್ತಾರೆ, ನಂತರ ಅವರನ್ನು ತೂಗಿ ನೋಡುತ್ತಾರೆ, ಅವರನ್ನು ಕ್ಷಮಿಸುವುದು ತೀರಾ ಅಪರೂಪ.
ನುಡಿಮುತ್ತು
ವೇಷ ಬೇರೆ ಭಾಷೆ ಬೇರೆ ದೇಶವೊಂದೆ ಭಾರತ; ಒಂದೆ ತಾಯ ಮಕ್ಕಳೆಂದು ಘೋಷಿಸೋಣ ಸತತ.