ನುಡಿಮುತ್ತು
ದುರ್ಬಲ ಮನಸ್ಸಿನ ಮನುಷ್ಯ ವಿಷಯಗಳನ್ನು ದೊಡ್ಡದು ಮಾಡುತ್ತಾನೆ. ಆದರೆ ಅವನಿಂದ ದೊಡ್ಡದನ್ನು ಪಡೆಯಲಾಗುವುದಿಲ್ಲ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ದುರ್ಬಲ ಮನಸ್ಸಿನ ಮನುಷ್ಯ ವಿಷಯಗಳನ್ನು ದೊಡ್ಡದು ಮಾಡುತ್ತಾನೆ. ಆದರೆ ಅವನಿಂದ ದೊಡ್ಡದನ್ನು ಪಡೆಯಲಾಗುವುದಿಲ್ಲ.
ನಿಮಗಿಂತ ಬೇರೆಯವರು ಕುರೂಪಿಗಳು, ಕಳಪೆಯವರು ಎಂದು ನೀವು ಯೋಚಿಸಿದ ಕೂಡಲೇ, ನೀವೇ ಕುರೂಪಿಗಳಾಗುತ್ತೀರಿ.
ಧೈರ್ಯ, ಧರ್ಮ,ಮಿತ್ರ ಮತ್ತು ಪತ್ನಿ ಈ ನಾಲ್ಕೂ ವಿಷಯಗಳ ಪರೀಕ್ಷೆ ಕಷ್ಟಗಳು ಬಂದಾಗ ಗೊತ್ತಾಗುತ್ತದೆ.
ವಿಪತ್ತುಗಳ ಅಭೇದ್ಯ ಗೋಡೆಯಲ್ಲಿ ದಾರಿ ತೋರಿಸುವಂಥದ್ದು ಚಾರಿತ್ರ್ಯ ನಿರ್ಮಾಣ.
ಕೃತಿ ಕೆಟ್ಟದಿದ್ದು,ಮನಸ್ಸು ಸದಾ ಕೆಡುಕು ಬಯಸುತ್ತಿದ್ದು, ಸಜ್ಜನರಂತೆ ಮುಖವಾಡ ಧರಿಸುತ್ತಿರುವ ಜನರ ಬಗ್ಗೆ ಎಚ್ಚರದಿಂದಿರಬೇಕು.
ಮನೆಯವರ ಮನಸ್ಸು ಅರಿಯದೆ, ಮನೆಯ ಸಜವಾಬ್ದಾರಿಯನ್ನು ಹೊರದೆ , ಮನೆಯ ಯಜಮಾನ ಗೌರವ ಪಡೆಯಲಾರ. ಅಧಿಕಾರ ಚಲಾಯಿಸಿ ಯಜಮಾನನಾಗುವುದು ಸಾಧ್ಯವಿಲ್ಲ.
ಕೆಟ್ಟ ನಡತೆಯವರನ್ನು ನೋಡಿ ನನಗೆ ಆಶ್ಚರ್ಯವಾಗುವುದಿಲ್ಲ. ಆದರೆ ಅಂತಹವರು ನಾಚಿಕೆಯಿಂದ ತಲೆ ತಗ್ಗಿಸದಿರುವುದು ನನಗೆ ಆಶ್ಚರ್ಯ.
ಅಂಧಕಾರದಲ್ಲಿ ದೀಪವನ್ನು ಹುಡುಕುತ್ತೇವೆ ಅಲ್ಲವೆ? ಅಂತೆಯೇ ಅವರಿಗೆ ಬೇಕಾದಾಗ ಮಾತ್ರ ಜನ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾರೆ. ಆದ್ದರಿಂದ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ.
ಅಧಿಕಾರದ ಮದ, ದುಡ್ಡಿನ ದುರಾಸೆ ನಮ್ಮನ್ನು ಅನ್ಯಾಯ, ದ್ರೋಹ,ಕಪಟ,ಅನೀತಿಗೆ ಇಳಿಸಿಬಿಡುತ್ತದೆ.
ನನ್ನ ಬಳಿ ಎಲ್ಲವೂ ಇದೆ ಎಂದು ಹೇಳುವವನಲ್ಲಿ ಏನೂ ಇರುವುದಿಲ್ಲ. ನನ್ನಲ್ಲಿ ಏನೂ ಇಲ್ಲ ಎಂದು ಹೇಳುವವನ ಬಳಿ ಬಹಳಷ್ಟು ಇರುತ್ತದೆ.
ಕೆಲವರಿಗೆ ಯಶಸ್ಸು ಸಿಕ್ಕುತ್ತದೆ. ಆದರೆ ಅದಕ್ಕೆ ಪಾತ್ರರು ಬೆರೆಯವರು ಆಗಿರುತ್ತಾರೆ.