ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನುಡಿಮುತ್ತುಗಳು
ನ

ನುಡಿಮುತ್ತುಗಳು

೩೨೯ ಲೇಖನಗಳು ೧,೬೮,೮೪೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೪೩ ವೀಕ್ಷಣೆ

ಎದುರಿಗೆ ಪ್ರಿಯವಾದ ಮಾತನ್ನಾಡುವ, ಪರೋಕ್ಷದಲ್ಲಿ ಕಾರ್ಯವನ್ನು ವಿಘಾತಗೊಳಿಸುವ ಸ್ನೇಹಿತನನ್ನು- ಒಳಗೆ ವಿಷ ತುಂಬಿ ಮೇಲೆ ಹಾಲಿರುವ ಪಾತ್ರೆಯನ್ನು ಹೇಗೋ ಹಾಗೆ ಬಿಟ್ಟುಬಿಡಬೇಕು.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೫೨ ವೀಕ್ಷಣೆ

ಒಳ್ಳೆಯತನವನ್ನು ಕಂಡಾಗ ಅನುಕರಿಸಿ, ಕೆಟ್ಟದ್ದನ್ನ ಕಂಡಾಗ ಆತ್ಮಪರಿಶೀಲನೆ ಮಾಡಿಕೊಳ್ಳಬೇಕು.

ನುಡಿಮುತ್ತು

ಜನ ೧೮ ಉಲ್ಲೇಖಗಳು ೨೧೬ ವೀಕ್ಷಣೆ

ಸಜ್ಜನರು ತಮಗೆ ಕೇಡೆನಿಸುವ ಶತ್ರುಗಳಿಗೂ ಹಿತವನ್ನೇ ಕೋರುತ್ತಾರೆ.

ನುಡಿಮುತ್ತು

ಜನ ೧೭ ಉಲ್ಲೇಖಗಳು ೨೯೩ ವೀಕ್ಷಣೆ

ಒಳ್ಳೆಯ ಶಿಕ್ಷಣದ ಉದ್ದೇಶವೆಂದರೆ ಜನರನ್ನು ಒಳ್ಳೆಯ ಕಾರ್ಯದ ಕಡೆಗೆ ಗಮನ ಹರಿಸುವಂತೆ ಮಾಡುವುದು, ಅಷ್ಟೇ ಅಲ್ಲ- ಒಳ್ಳೆಯ ಕಾರ್ಯಗಳಲ್ಲಿ ಆಸಕ್ತಿ ವಹಿಸುವಂತೆ ಮಾಡುವುದೂ ಆಗಿದೆ.

ನುಡಿಮುತ್ತು

ಜನ ೧೭ ಉಲ್ಲೇಖಗಳು ೨೩೧ ವೀಕ್ಷಣೆ

ಸುಳ್ಳು ಮೋಸ ಮಾಡುವವನಿಗೆ ದೊಡ್ಡ ಶಿಕ್ಷೆ ಎಂದರೆ ಅವನನ್ನು ಯಾರೂ ನಂಬುವುದಿಲ್ಲ ಎಂದಲ್ಲ, ಅವನು ಯಾರನ್ನೂ ನಂಬಲಾಗುವುದಿಲ್ಲ ಎಂಬುದು.

ನುಡಿಮುತ್ತು

ಜನ ೧೭ ಉಲ್ಲೇಖಗಳು ೩೦೫ ವೀಕ್ಷಣೆ

ಶುದ್ಧ ಚಾರಿತ್ರ್ಯದ ಎದುರು ವಿದ್ಯೆಯ ಬೆಲೆ ಕಮ್ಮಿ.

ನುಡಿಮುತ್ತು

ಜನ ೧೭ ಉಲ್ಲೇಖಗಳು ೨೩೨ ವೀಕ್ಷಣೆ

ಕಡುಕೋಪ ಬಂದಾಗ ತಡೆದುಕೊಂಡವನೇ ಜಾಣ. ಸಹನೆ ಕಹಿ, ಅದರ ಫಲ ಸಿಹಿ.

ನುಡಿಮುತ್ತು

ಜನ ೧೭ ಉಲ್ಲೇಖಗಳು ೨೯೩ ವೀಕ್ಷಣೆ

ತೆಗೆದುಕೊಳ್ಳುವುದಕ್ಕಿಂತ ಮೊದಲು ಕೊಡು; ಅದರಿಂದ ನಿನಗೆ ಒಳ್ಳೆಯದೇ ಸಿಕ್ಕೀತು.

ನುಡಿಮುತ್ತು

ಜನ ೧೬ ಉಲ್ಲೇಖಗಳು ೨೦೬ ವೀಕ್ಷಣೆ

ಬರಲಿರುವ ಸನ್ನಿವೇಶಗಳನ್ನು ಸದಾ ನಿಮ್ಮ ಪರವಾಗಿ ಇಟ್ಟುಕೊಳ್ಳುವುದು ಜಾಣತನ.

ನುಡಿಮುತ್ತು

ಜನ ೧೬ ಉಲ್ಲೇಖಗಳು ೨೨೬ ವೀಕ್ಷಣೆ

ದೂರದ ವಸ್ತುವನ್ನು ಪಡೆಯಲು ಸತತ ಪ್ರಯತ್ನ ಪಡುವವನು ವಿವೇಕ ಶಾಲಿ.

ನುಡಿಮುತ್ತು

ಜನ ೧೬ ಉಲ್ಲೇಖಗಳು ೨೨೮ ವೀಕ್ಷಣೆ

ಬೊಮ್ಮವನು ಅರಿತವನು ಸುಮ್ಮನಾಗಿರಬೇಕು.

ನುಡಿಮುತ್ತು

ಜನ ೧೬ ಉಲ್ಲೇಖಗಳು ೨೪೧ ವೀಕ್ಷಣೆ

ಸ್ವೇಚ್ಚೆಯಾಗಿ ಬೆಳೆಯುತ್ತಿರುವ ಶತ್ರುವನ್ನು ಯಾವನು ಉದಾಸೀನ ಮಾಡುವನೋ, ಯಾವನು ಸೋಮಾರಿತನದಿಂದ ಕೂಡಿ ರೋಗವನ್ನು ಉದಾಸೀನ ಮಾಡುವನೋ, ಅವನು ಅದರಿಂದಲೇ ಕ್ರಮ ಕ್ರಮವಾಗಿ ಕೊಲ್ಲಲ್ಪಡುತ್ತಾನೆ.