ನುಡಿಮುತ್ತು
ಸತ್ಯವನ್ನು ಹೇಳಲೇಬೇಕು. ಅದು ಯಾರಿಗೆ ನೋವು ಮಾಡಿದರೂ ಸತ್ಯ ಸತ್ಯವೇ. ಅದನ್ನು ಬರೆಯಬೇಕು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸತ್ಯವನ್ನು ಹೇಳಲೇಬೇಕು. ಅದು ಯಾರಿಗೆ ನೋವು ಮಾಡಿದರೂ ಸತ್ಯ ಸತ್ಯವೇ. ಅದನ್ನು ಬರೆಯಬೇಕು.
ಶ್ರೀಮಂತಿಕೆಯ ಸ್ವಾರ್ಥ ಎಂಥಹುದೆಂದರೆ ನಾವು ಹೆಚ್ಚು ಹೆಚ್ಚು ಸಂಪಾದಿಸುವುದಷ್ಟೇ ಅಲ್ಲ, ಇತರರು ಕಡಿಮೆ ಉಳ್ಳವರಾಗಿರುವಂತೆಯೂ ಯತ್ನಿಸುವುದು.
ಯಾವುದನ್ನಾಚರಿಸಿದರೆ ಧರ್ಮವಿಲ್ಲವೋ, ಕೀರ್ತಿ ಇಲ್ಲವೋ, ಒಳ್ಳೆಯ ಹೆಸರಿಲ್ಲವೋ, ದೇಹಕ್ಕೆ ಆಯಾಸ ಮಾತ್ರ ಆಗುವುದೋ ಅಂಥ ಕಾರ್ಯವನ್ನು ಯಾವನು ಮಾಡಿಯಾನು?
ಮನಸ್ಸಿಗೆ ಆನಂದ ಉಂಟುಮಾಡುವುದೇ ಸ್ವರ್ಗ, ದು:ಖವೇ ನರಕ, ಸ್ವರ್ಗ ನರಕಗಳಿಗೆ ಪುಣ್ಯ ಪಾಪಗಳೆಂಬ ಹೆಸರು.
ವಯಸ್ಸಾದ ಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅದನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂತಹ ಕೆಲಸವನ್ನು ಬದುಕಿರುವಾಗ ಮಾಡಬೇಕು.
ಮುಗಿಲಿಗೆ ಯಾವ ಅಪೇಕ್ಷೆಯೂ ಇಲ್ಲ, ಯಾರದೇ ದಾಕ್ಷಿಣ್ಯ ಇಲ್ಲ, ಯಾವುದೇ ಪ್ರೀತಿಯ ಹಂಗಿಲ್ಲ, ಜೊತೆಗಾರನೆಂಬ ಭಾವನೆಯೂ ಇಲ್ಲ. ಆದರೂ ಮುಗಿಲು ತನ್ನದೇ ಆದ ದೊಡ್ಡಸ್ತಿಕೆಯಿಂದ ಜನಗಳ ಬೇಗುದಿಯನ್ನು ಹೋಗಲಾಡಿಸುತ್ತದೆ.
ರೋಗಿಗೆ ವೈದ್ಯನು ಮಾಡುವ ಶಸ್ತ್ರ ಚಿಕಿತ್ಸೆಯಿಂದ ರೋಗಿಗೆ ಹಿಂಸೆಯಾದರೂ, ಗುಣವಾಗಲಿ ಎಂಬ ಭಾವದಿಂದಲೇ ಹೊರತು ಅದೊಂದು ಕ್ರಿಯೆಯಲ್ಲ.