ನುಡಿಮುತ್ತುಗಳು
ನುಡಿಮುತ್ತು
ನಮ್ಮ ಸ್ವಭಾವ, ನಮ್ಮ ಸಂದರ್ಭ ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು, ದಾರಿ ಯಾವುದು, ಎಂಬುದನ್ನು ನಾವೇ ಗೊತ್ತು ಮಾಡಿಕೊಳ್ಳಬೇಕು.
ನುಡಿಮುತ್ತು
ವಯಸ್ಸಾದ ಬಳಿಕ ಗುಣವಂತರಾಗುವುದು, ದೆವ್ವ ಉಳಿಸಿಬಿಟ್ಟಿದ್ದನ್ನು ದೇವರಿಗೆ ಕೊಟ್ಟಂತೆ .
ನುಡಿಮುತ್ತು
ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ!
ನುಡಿಮುತ್ತು
ಅಂದಂದಿನ ಕೆಲಸವನ್ನು ಅಂದಂದು ಮಾಡಿ , ಅದರ ವಿಷಯವಾಗಿ ಬಹಳವಾಗಿ ಚಿಂತೆ ಮಾಡದೆ ಇರಬೇಕು. ಅದೇ ಒಳ್ಳೆಯ ಜೀವನ.
ನುಡಿಮುತ್ತು
ಚಿಕ್ಕದು ಎನ್ನುವ ಕೆಲಸಗಳನ್ನು ಈಗಲೇ ಚೆನ್ನಾಗಿ ಮಾಡು. ಆಗ ದೊಡ್ಡ ಕೆಲಸಗಳು ತಾವಾಗಿಯೇ ನಿನ್ನನ್ನು ಹುಡುಕಿಕೊಂಡು ಬರುತ್ತವೆ.
ನುಡಿಮುತ್ತು
ಅವನು ಏನು ಕೆಲಸ ಮಾಡಲಾರ ಎನ್ನುವುದನ್ನು ನಾನು ಯೋಚಿಸುವುದಿಲ್ಲ; ಅವನು ಏನು ಕೆಲಸ ಮಾಡಬಲ್ಲ ಎನ್ನುವುದನ್ನು ನಾನು ಗಮನಿಸುತ್ತೇನೆ.
ನುಡಿಮುತ್ತು
ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ, ತಮ್ಮೊಳಗಿದ್ದ ಮಹಾಘನವನರಿಯರು ನೋಡಾ ಚೆನ್ನಮಲ್ಲಿಕಾರ್ಜುನ..
ನುಡಿಮುತ್ತು
ಎನ್ನಗುಣವೆಂಬ ಕಳೆಯ ಕಿತ್ತು ಸಲಹಯ್ಯ ಲಿಂಗ ತಂದೆ, ಸುಳಿದೊಗೆದು ಬೆಳೆವೆನು ನೋಡಾ ಕೂಡಲ ಸಂಗಮದೇವಾ..
ನುಡಿಮುತ್ತು
ಅನಗತ್ಯವಾದುದನ್ನು ಸಂಗ್ರಹಿಸಿಡುವ ಮನೋವೃತ್ತಿ ಅಪಾಯಕರವಾದುದು. ಇದರಿಂದ ಅತಿಯಾದ ಲೋಭ, ದುರಾಸೆಗಳು ಹೆಚ್ಚಿ ವ್ಯಕ್ತಿಯ ಪತನಕ್ಕೆ ಕಾರಣವಾಗುತ್ತವೆ.