ನುಡಿಮುತ್ತು
ವ್ಯಾಪಾರದಲ್ಲಿ ಸತ್ಯ ಹೇಳುವುದು ಸಾಧ್ಯವಿಲ್ಲ ಎಂದು ವರ್ತಕರು ಹೇಳುವುದನ್ನು ಕೇಳಿದ್ದೆ. 'ಅದು ಸರಿ' ಎಂದು ನನಗೆ ಅನ್ನಿಸಲಿಲ್ಲ, ಈಗಲೂ ಅನ್ನಿಸುವುದಿಲ್ಲ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ವ್ಯಾಪಾರದಲ್ಲಿ ಸತ್ಯ ಹೇಳುವುದು ಸಾಧ್ಯವಿಲ್ಲ ಎಂದು ವರ್ತಕರು ಹೇಳುವುದನ್ನು ಕೇಳಿದ್ದೆ. 'ಅದು ಸರಿ' ಎಂದು ನನಗೆ ಅನ್ನಿಸಲಿಲ್ಲ, ಈಗಲೂ ಅನ್ನಿಸುವುದಿಲ್ಲ.
ಆಧುನಿಕ ರಾಜಕೀಯ ಮನುಷ್ಯರ ನಡುವಿನ ತಿಕ್ಕಾಟವಲ್ಲ; ಶಕ್ತಿ ಕೂಟಗಳ ನಡುವಿನ ಹೋರಾಟ.
ಸಾವಿರ ಅಶ್ವಮೇಧ ಯಾಗಗಳನ್ನೂ, ಸತ್ಯವನ್ನೂ ತಕ್ಕಡಿಯಲ್ಲಿ ತೂಗಿದಾಗ - ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚು ತೂಗುತ್ತದೆ.
ಯಾರು ಈ ಲೋಕದಲ್ಲಿ ಅತ್ಯಂತ ಮೂಢರೋ, ಯಾರು ಅತ್ಯಂತ ಬುದ್ಧಿಶಾಲಿಗಳೋ- ಅವರೇ ಸುಖವಾಗಿರುವವರು. ಮಧ್ಯಮ ವರ್ಗದವರು ಕ್ಲೇಶ ಪಡುತ್ತಾರೆ.
ಕುರುಡನ ಹೆಗಲ ಮೇಲೆ ಹೆಳವ ಕುಳಿತು ಒಂದು ಗಾವುದ ದೂರ ನಡೆದ ಮಾತ್ರಕ್ಕೆ, ಅದು ಒಬ್ಬ ಬಲಿಷ್ಠನು ದಾರಿ ನಡೆದಂತೆ ಆದೀತೆ?
ಮಲ್ಲಿಗೆಯ ಪರಿಮಳವನ್ನು ಬಲ್ಲ ದುಂಬಿಯು ದರ್ಭೆಯನ್ನು ಮೋಹಿಸುವುದಿಲ್ಲ.
ಕೀರ್ತಿ ವಿಸ್ತರಿಸುತ್ತಾ ಹೋಗುವ ಅಲೆಯಂತೆ. ಒಮ್ಮೆಲೇ ಇಲ್ಲವಾಗಿ ಬಿಡಬಹುದು!
ಒಂದೊಂದು ಹನಿಯಾಗಿಯೇ ಬಿದ್ದರೂ ಕಾಲಾಂತರದಲ್ಲಿ ಕೊಡವು ನೀರಿನಿಂದ ತುಂಬುವುದು. ಅದೇ ರೀತಿ ವಿದ್ಯೆ ಮತ್ತು ಹಣವೂ ಸಹ ಹನಿ ಹನಿಯಂತೆ ಸ್ವಲ್ಪ ಸ್ವಲ್ಪ ವಾಗಿಯೇ ಸಂಗ್ರಹವಾಗುವುದು.