ನುಡಿಮುತ್ತು
ಶೂದ್ರರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಹೋರಾಡುವವರು ಬ್ರಾಹ್ಮಣರ ವಿರುದ್ಧ ಅನಗತ್ಯವಾಗಿ ಬರೆಯಬೇಕಿಲ್ಲ. ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಶೂದ್ರರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಹೋರಾಡುವವರು ಬ್ರಾಹ್ಮಣರ ವಿರುದ್ಧ ಅನಗತ್ಯವಾಗಿ ಬರೆಯಬೇಕಿಲ್ಲ. ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕು.
ಭಯಂಕರವಾದ ಕಷ್ಟದಲ್ಲಿ ಮುಳುಗುತ್ತಿರುವವರನ್ನು ನೆಂಟರಾಗಲೀ, ಮಿತ್ರರಾಗಲೀ, ಬೇಕಾದಷ್ಟು ಹಣವಾಗಲೀ - ರಕ್ಷಿಸಲಾರದು.
ಬುದ್ದಿಮತ್ತೆ, ಚಾಕಚಕ್ಯತೆ ಎಲ್ಲ ಇದ್ದೂ ತನ್ನ ಸ್ವಾರ್ಥವನ್ನು ಮಾತ್ರ ನೋಡಿಕೊಳ್ಳುವವನು ಎಂದೂ ನಾಯಕನಾಗಲಾರ. ತಾನು ಪ್ರತಿನಿಧಿಸುವ ಸಮೂಹದ ಹಿತವನ್ನು ಕಾಪಾಡುವವನು ನಾಯಕನೆನಿಸಿಕೊಳ್ಳುತ್ತಾನೆ.
ಪ್ರಜಾ ರಕ್ಷಣೆಗಾಗಿ ಮಾಡುವ ಕಾರ್ಯವು ಕ್ರೂರವಾಗಿರಲಿ ಇಲ್ಲದಿರಲಿ, ಪಾಪಹೇತುವಾಗಿರಲಿ ದೋಷಮುಕ್ತವಾಗಿರಲಿ, ಪ್ರಜಾಪಾಲನೆಯ ಹೊಣೆ ಹೊತ್ತವನು ಅದನ್ನು ಮಾಡಲೇಬೇಕು.
ಕಾನೂನುಗಳಿಂದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಗಳಿಗೆ ಗುರಿ ಆಗಬೇಕಾಗುತ್ತದೆ. ಪ್ರಾಪಂಚಿಕ ಕಾನೂನುಗಳ ರೀತಿಯೇ ಹೀಗೆ.