ಮೂರು ಕಾಲ!!!
ಸಖೀ, ಈ ಬೆಂಗಳೂರಿನ ಹವೆ ಬೆಳಗು ಬೈಗಿನ ನಡುವೆ ತೋರಿಸಿ ಬಿಡುವುದು ನಮಗೆ ಮೂರು ಕಾಲ; ಮುಂಜಾನೆ ಛಳಿ, ಮಧ್ಯಾಹ್ನ ಸೆಕೆ, ಮತ್ತೆ ಸಂಜೆ ನೀ ನೋಡು ಮಳೆಗಾಲ! *-*-*-*-*-*
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆತ್ರಾಡಿ ಸುರೇಶ ಹೆಗ್ಡೆ
ಸಖೀ, ಈ ಬೆಂಗಳೂರಿನ ಹವೆ ಬೆಳಗು ಬೈಗಿನ ನಡುವೆ ತೋರಿಸಿ ಬಿಡುವುದು ನಮಗೆ ಮೂರು ಕಾಲ; ಮುಂಜಾನೆ ಛಳಿ, ಮಧ್ಯಾಹ್ನ ಸೆಕೆ, ಮತ್ತೆ ಸಂಜೆ ನೀ ನೋಡು ಮಳೆಗಾಲ! *-*-*-*-*-*
ಸೀತಾ ಸೀತಾ ಸೀತಾ ಬಾಯ್ಬಿಟ್ಟು ಹೇಳೇ ಸೀತಾ ನೀನ್ಯಾಕೆ ನನ್ನ ಈ ತರಹ ಸತಾಯಿಸ್ತೀಯಂತಾ ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ ನನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿರುವೆಯಾ ನನ್ನ ತಲೆ ಭಾರವಾಗುತಿದೆ, ಕಣ್ಣುಗಳು ಉರಿಯುತಿವೆ ನಿನ್ನಿಂದಾಗಿ...
ಹೂವುಗಳಂತೆ ನಗುತಿರಲು ಅದುವೇ ಜೀವನ ನಕ್ಕು ದುಃಖವನು ಮರೆಯುತಿರುವುದೇ ಜೀವನ ಗೆಲುವಿನಿಂದ ದೊರೆವ ಸಂತಸ ಎಷ್ಟಿದ್ದರೇನಂತೆ ಈ ಹೃದಯ ಯಾರಿಗಾದರೂ ಸೋತರೆ ಸಿಗುವ ಸಂತಸವೇ ಜೀವನ ಕನಸುಗಳು ನಮ್ಮನ್ನು ನಿದ್ರೆಯಲೇ ಸಂದರ್ಶಿಸುತ್ತವೆ ನಿಜ ಆ ದೇವರು ಪ್ರತೀ...
ನನ್ನದೇನಿದ್ದರೂ ಇನ್ನು ಒಂದು ನಗುಮುಖ ಮತ್ತೈದು ಪೂರ್ಣ ವಿರಾಮ ಶಬ್ದ ಬರೆದು ಪ್ರತಿಕ್ರಿಯಿಸುವುದಕ್ಕೆ ಕೊಡಬೇಕೆಂದಿದ್ದೇನೆ ನಾನು ವಿರಾಮ ಯಾವ ಶಬ್ದ ಯಾವ ಅರ್ಥ ಪಡೆದು ಯಾರ ಮನಸ ನೋಯಿಸುವುದೋ ಯಾವ ಕ್ಷಣ ಯಾರಲ್ಲಿ ವೈರಾಗ್ಯ ಮೂಡಿಸಿ ಇಲ್ಲಿಂದಾಚೆ ದೂ...
ಸಖೀ, ಇಂದು ನಿನ್ನ ದರುಶನವಾಗಿಲ್ಲವೆಂಬ ಮುನಿಸು ನನಗಿದ್ದಷ್ಟೇ ಆ ಸೂರ್ಯನಿಗೂ ಇದೆ ನೋಡು, ಅದಕ್ಕೇ ಮರೆಯಾಗಿ ಕೂತಿದ್ದಾನೆ ಕೋಪಿಸಿಕೊಂಡು; ನೀನಿಂದು ಎರಡು ಸವಿಮಾತ ಆಡಿಲ್ಲವೆಂಬ ಬೇಸರ ನನಗಿದ್ದಷ್ಟೇ ಬೀಸುತ್ತಿರುವ ಗಾಳಿಗೂ ಇದೆ, ನನ್ನ ಉಸಿರು ಬಿಸಿ...
ಸಖೀ, ಹೀಗಾಗಬೇಕಿತ್ತು, ಆಗಿದೆ ಅಷ್ಟೆ, ಆಗಬಾರದ್ದೇನೂ ಆಗಿಲ್ಲವಷ್ಟೆ? ಮೇಲಕ್ಕೇರಿದವರು ಕೆಳಗಿಳಿಯಲೇ ಬೇಕು, ಇದು ಲೋಕ ನಿಯಮ; ಆದರೇನು ಮಾಡೋಣ, ಇದ ಅರಿಯುವಷ್ಟು ನಮಗಿಲ್ಲ ಸಂಯಮ. ಅಂದು ನನ್ನ ಪ್ರತಿಯೊಂದು ಮಾತಿಗೂ ಹೊಸ ಹೊಸ ಅರ್ಥವ ನೀಡಿ, ನನ್ನನ್ನ...
"ಥಟ್ ಅಂತ ಕವನ" ಬರೆಯುವ ಸ್ಪರ್ಧೆ ಇದ್ದರೆ ನನಗೂ ಹೇಳಿ ಬರುತ್ತೇನೆ ಪುರುಸೊತ್ತಿದ್ದರೆ ನನಗಿನ್ನೇನೂ ಬೇಕಾಗಿಲ್ಲ ಪುರಸ್ಕಾರ ಪ್ರಶಸ್ತಿ ಅನ್ನುತ್ತೀದ್ದೀರಲ್ಲಾ "ಆಶು ಕವಿ" ಇದೇ ಜಾಸ್ತಿ ಪದ್ಯರೂಪದಲಿ ಬರೆಯುವ ರೂಡಿಯಾಗಿ ಬಿಟ್ಟಿದೆ ಲೇಖನಗಳ ಸಂಖ್ಯೆ...
ಕರಾವಳಿಯಲ್ಲಿ ಬಿಜೆಪಿ ಮತ್ತೆ ಈಗ ಜಯಭೇರಿ ಬಾರಿಸಿದೆ ಪೂಜಾರಿ ಕಂಡ ಕನಸುಗಳ ಹೇಗೆ ನುಚ್ಚು ನೂರಾಗಿಸಿದೆ ಮೊಯ್ಲಿ ಸೋಲುವ ಕುದುರೆ, ನಾನೇ ಗೆದ್ದು ಬರುವೆ ಎಂದಿದ್ದ ಬಂಡು ಧೈರ್ಯಮಾಡಿ ಮತ್ತೆ ಅದೇಕೋ ಕಣಕ್ಕೆ ಧುಮುಕಿದ್ದ ಮೊಯ್ಲಿ ಹಲವು ಬಾರಿ ಮಾಡಿದ ತ...
ಜನ ಜಾತ್ರೆಯ ನಡುವೆಯೂ ನನಗೆ ನನ್ನ ಒಂಟಿತನ ಕಾಡುತ್ತಿದ್ದಾಗ ಅಂದುಕೊಳ್ಳುತ್ತಿದ್ದೆ ನಾನು ನನ್ನ ಅದೃಷ್ಟದಲ್ಲಿ ಜೊತೆಗಾರರಿಲ್ಲೆಂದು; ಒಂದು ದಿನ ಆಕಸ್ಮಿಕವಾಗಿ ನಿನ್ನ ಗೆಳೆತನವಾದಾಗ ಅಂದುಕೊಂಡೆ ನಾನು ನನ್ನ ಹಸ್ತರೇಖೆಯಲೇ ಏನೋ ವಿಶೇಷತೆಯಿರಬೇಕೆಂದ...
ಇನ್ನು ಸಂಸತ್ತಿನಲ್ಲಿ ಅಪ್ಪ ಮಲಗಿದರೆ ಎಬ್ಬಿಸಲು ಅಲ್ಲಿ ಮಗನಿರುತ್ತಾನೆ "ಅಪ್ಪಾ ದೊಡ್ಡಾಟ ಮುಗೀತು ಮನೇಗೆ ಹೋಗೋಣ ಬಾ" ಅನ್ನುತ್ತಾನೆ ಇನ್ನೊಬ್ಬ ಅಪ್ಪನ ಮುಖಕ್ಕೆ ತನ್ನ ತವರೂರಿನಲ್ಲೇ ಆಯ್ತು ಮಂಗಳಾರತಿ ಮತದಾರ ಕೇಳಿದ ಸಾಕಪ್ಪಾ ಸಾಕು ಇನ್ನೆಷ್ಟು...
ಮತ್ತೆ ಬೇಡಿಕೆಯಲ್ಲಿದ್ದಾರೆ ಮಾಯಾ ಜಯಾ ಮತ್ತು ಮಮತಾ ಇದೀಗ ನೆನಪಿಗೆ ಬರುತಿಹುದೆನಗೆ ನಮ್ಮ ಜಾರ್ಜರ ಸಮತಾ ಚರಿತ್ರೆ ಪುನರಾವರ್ತನೆಯಾಗುವುದೆಂಬ ಮಾತು ಎಷ್ಟು ಸತ್ಯ ಈ ನಾರೀಮಣಿಗಳು ತಯಾರಿಸೋ ಕಿಚಡಿಯೇ ಎಲ್ಲರಿಗೂ ಪಥ್ಯ ನೂರು ಕೋಟಿ ಜನರಿಗೆ ನೂರಾರು...
ಹಲವು ತಿಂಗಳುಗಳ ನಂತರ ನಾನಾಗಿದ್ದೇನೆ ಮತ್ತೀಗ ಏಕಾಂಗಿ ಏಕೆಂದರೆ ಮನೆಯಲ್ಲಿಲ್ಲ ಈಗ ನನ್ನ ಮಗಳು ಮತ್ತೆನ್ನ ಅರ್ಧಾಂಗಿ ವರುಷವಾಗಿತ್ತು ನಮ್ಮ ಮಗಳು ಊರತ್ತ ಹೋಗದೇ ತಪಸ್ಸಿಗೆ ಕೂತಂತಿತ್ತು ಆಕೆ ತನ್ನ ಓದಿನಿಂದ ಕಿಂಚಿತ್ತೂ ಬಿಡುವಿಲ್ಲದೇ ಆಕೆಯಿಂದಾಗ...