ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು
ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.___LINK_OPEN_blogger_onblur...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.___LINK_OPEN_blogger_onblur...
ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) ವಿಯದುಪಚ...
ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್ಮಲಯಸ್ಯ ಚ ವಾಯುಭಿಃ | ವಿ...
ಕೇಳ್ದವರ ಹಿಗ್ಗಿಸಿತು ನಾದದಲಿ ವೇದಗಳ ಹೊಮ್ಮಿಸುತ ಮರಗಿಡಗಳನೂ ನಲಿಸಿತು; ಕಲ್ಲ ಕರಗಿಸಿತು ನೆರೆನಿಂತ ಮಿಗಗಳ ಮೈಮರೆಸುತ ತುರುಗಳಿಗೆ ಸಂತಸವೀಯಿತು; ಗೋವಳರ ಸಡಗರಿಸಿ ಮತ್ತೆಲ್ಲ ಮುನಿಗಳಿಗೆ ನೆಮ್ಮದಿ ತರುತ ಸಪ್ತ ಸ್ವರಗಳನೆಲ್ಲೆಲ್ಲು ಹರಡಿತು; ಆ ಮ...
ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ ಮರಳಿ ಮರಳಿ ಬರುವ ಜೇನ್ದುಂಬಿಯಂತೆ ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ ಓರಣದಿ ಹೊರಳುತಲಿ ನೋಡುತಿಹ ಮುಗುದೆ ಆ ಕಡಲಣುಗೆಯ ಸೊಗದ ನೋಟದ ಮಾಲೆ ತೋರುತಿರಲಿ ನನಗೆ ಸಕಲ ಸಂಪದಗಳನೆ! ಸಂಸ್ಕೃತ ಮೂಲ (ಶಂಕರಾಚಾರ್...
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಂಚಯ ದಲ್ಲಿ ಪ್ರತಿ ಆಗಸ್ಟ್ ನ ಮೊದಲ ಹದಿನಾಲ್ಕು ದಿನಗಳೂ ಪ್ರತಿನಿತ್ಯ ಒಂದು ಮುಕ್ತ ತಂತ್ರಾಂಶದ ಬಗ್ಗೆ ಬರಹಗಳು ಬರುತ್ತಿವೆ. ಆ ಅರಿವಿನ ಅಲೆಗಳಲ್ಲಿ, ಇಂದು ನಾನು, ಆಕಾಶ ವೀಕ್ಷಣೆಗೆ ಅನುವು ಮಾಡಿಕೊಡುವ ಸ್ಟೆಲೇರ...
ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ ರಕ್ಷಯೇತ್ || -ಹಂಸಾನಂ...
ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸ...
ನಮ್ಮ ಮದುವೆಗಳಲ್ಲಿ ಒಂದು ಸಂಪ್ರದಾಯವಿದೆ - ಅರುಂಧತೀ ದರ್ಶನ. ಎಲ್ಲ ಸಂಪ್ರದಾಯಗಳಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ, ನಾನು ನನ್ನ ಮದುವೆಯೂ ಸೇರಿದಂತೆ ಬೇಕಾದಷ್ಟು ಮದುವೆಯ ಸಮಾರಂಭಗಳಲ್ಲಿ ಇದನ್ನು ನೋಡಿದ್ದೇನೆ. ನೋಡಿ ಮನಸಿನೊಳಗೇ ನಕ್ಕಿದ್ದೇನೆ ಕ...
ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು; ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡುವರು? ಏನೇನ ಮಾಡಾರು? ಅದೇನೇನ...
"ಯಮುನೆಯ ಮರಳಲಿ ಆಡಪೋಗಿಹಅಣ್ಣ ಬಲರಾಮ ಬರುವ ಮುನ್ನವೇಬಟ್ಟಲ ಹಾಲನು ಕುಡಿದರೆ ನಿನ್ನಯಕೂದಲು ಬೆಳೆವುದು ಸೊಂಪಾಗಿ"ಬಣ್ಣಿಸಿ ಇಂತು ಯಶೋದೆ ನುಡಿದಿರೆಬಟ್ಟಲ ಹಾಲನು ವೇಗದಿ ಕುಡಿಯುತಮುಟ್ಟುತ ಜುಟ್ಟನು ಬೆಳೆದಿಹುದೆನ್ನುತಹಿಗ್ಗುವ ಹರಿಯೇ ಎಮ್ಮ ಕಾಯಲಿ...