ಬೊಗಸೆಯ ಹೂವುಗಳು
ಬೊಗಸೆಯಲಿದ್ದರೆ ಹೂವುಗಳು ಅಂಗೈಯೆರಡೂ ಘಮಘಮವು; ಅಂತೆಯೆ ಪ್ರೀತಿಯು ಸುಜನರದು ಎಡಬಲಕೆರಡಕು ಸರಿಸಮವು! ಸಂಸ್ಕೃತ ಮೂಲ: ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ| ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ|| -ಹಂಸಾನಂದಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
hamsanandi
ಬೊಗಸೆಯಲಿದ್ದರೆ ಹೂವುಗಳು ಅಂಗೈಯೆರಡೂ ಘಮಘಮವು; ಅಂತೆಯೆ ಪ್ರೀತಿಯು ಸುಜನರದು ಎಡಬಲಕೆರಡಕು ಸರಿಸಮವು! ಸಂಸ್ಕೃತ ಮೂಲ: ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ| ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ|| -ಹಂಸಾನಂದಿ
ಎರ್ಡೆರ್ಡ್ ಸಲ ನೋಡಕ್ಮೊದಲು ಆಡೋದ್ಬೇಡ ಮಾತು ಅಂತ್ಲೇ ಕೊಟ್ಟಿರ್ರ್ಬೇಕು ಮನುಷ್ಯರ್ಗೆ ಎರ್ಡ್ ಕಣ್ಣು - ಒಂದೇ ನಾಲ್ಗೆ! ಸಂಸ್ಕೃತ ಮೂಲ: ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ | ಅಕ್ಷಿಣಿ ದ್ವೇ ಮನುಷ್ಯಾಣಾಂ ಜಿಹ್ವಾ ತ್ವೈಕೇವ ನಿರ್ಮಿ...
ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು.
ಕನ್ನಡಕಂದರು ಚಂದ್ರ ಶುಕ್ರ ಮಂಗಳ ಯುತಿ ಮುಂದಿನ ವಾರದಲ್ಲಿ ಬರುವುದರ ಬಗ್ಗೆ ಬರೆದಿದ್ದಾರೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಈ ಬರಹ.
ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ.
ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ ರೋಗ ರುಜಿನ ಕಾಯೋದಿಲ್ಲ; ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್ ಅಂತ ಯಮನೂ ನಿಲ್ಲೋದಿಲ್ಲ; ಮನಸ್ನೊಳಗೆ ಒಳ್ಳೇ ಕೆಲ್ಸ ಮಾಡ್ಬೇಕಂತ ಅನ್ನಿಸ್ತಿದ್ರೆ ಮಾಡಿಮುಗಿಸ್ಬೇಕ್ ಅವಾವಾಗ್ಲೇ ಕಾಲವನ್ನ ತಡೆಯೋರಿಲ್ಲ! ಸಂಸ್ಕೃತ ಮೂಲ...
ಇದು ಕಳೆದ ವರ್ಷ ಈ ಸಮಯದಲ್ಲಿ ನಾನು ಬರೆದಿದ್ದ ಬರಹ. ಮತ್ತೊಮ್ಮೆ ಹಾಕುತ್ತಿದ್ದೇನೆ, ಯಾವುದೇ ಬದಲಾವಣೆಗಳಿಲ್ಲದೆ. ಯಾಕಂದರೆ, ಇವತ್ತು ಚಿತ್ರಾ ಪೂರ್ಣಿಮೆ, ನಮ್ಮೂರಲ್ಲಿ ತೇರು! ಅದಕ್ಕೆ. ------------------------------------------------...
ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ ನೆರವಾದ ಎಲ್ಲ ಸಂಪದಿಗರ...
ಇಂದು ರಾಮನವಮಿ. ರಾಮ ಹುಟ್ಟಿದ ದಿನವೆಂಬ ನೆನಪಿನಲ್ಲಿ ಮಾಡುವ ಹಬ್ಬ. ಮಂಗಳಕರವಾದ ದಿನವೆಂಬ ನಂಬಿಕೆ. ಇಂತಹ ದಿನಕ್ಕೆ ತಕ್ಕಂತೆ, ಒಂದು ಮಂಗಳಕರ ಸಂಗೀತ ರಚನೆಯನ್ನುವಿವರಿಸೋಣ ಎನ್ನಿಸಿತು.
ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ? ಸಂಸ್ಕೃತ ಮೂಲ- ಭರ್ತೃಹರಿಯ ನೀತಿಶತಕದಿಂದ...
ಅರಿವಿಲ್ಲದಿರುವುದ ಮುಚ್ಚಿಡಲೆಂದೇ ಸರಸಿಜಭವ*ನು ಕೊಟ್ಟಿಹನಲ್ಲ! ಧರಿಸುವುದೊಳಿತು ಮೌನದ ಒಡವೆಯ ಅರಿತವರೆ ಸುತ್ತಲು ನೆರೆದಿರುವಲ್ಲಿ ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)
ಹೊತ್ತಿಗೆಯೊಳಗಡೆ ಅಡಗಿದ ಅರಿವು ಕಂಡವರ ಕೈ ಸೇರಿದ ಹಣವು ಬೇಕಾದೊಡನೆ ಸಿಗದಂತಿರಲು ಅದಲ್ಲ ಅರಿವು! ಅದಲ್ಲ ಹಣವು! ಸಂಸ್ಕೃತ ಮೂಲ: ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ| ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ|| -ಹಂಸಾನಂದಿ