ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಡಿಜಿಟಲ್ ಆರ್ಕೈವ್

ಹರಿದಾಸ ಸಂಪದ

ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ, ಶ್ರೀಪಾದರಾಯ, ವ್ಯಾಸರಾಯ ಮುಂತಾದ ಹರಿದಾಸರ ಕೃತಿಗಳ ಡಿಜಿಟಲ್ ಸಂಗ್ರಹ.

೧,೮೪೪ ದಾಸರ ಪದಗಳು

ನಾರಾಯಣ ಗೋವಿಂದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಧನಶ್ರೀ ಆದಿತಾಳ )ನಾರಾಯಣ ಗೋವಿಂದ ಹರಿ ನಾರಾಯಣ ಗೋವಿಂದ ||ಪ|| ನಾರಾಯಣ ಗೋವಿಂದ ಮುಕುಂದ ಪರತರ ಪರಮಾನಂದ ||ಅ||ಮೊದಲು ಮತ್ಸ್ಯನಾಗಿ ಉದಿಸಿ ಸೋಮನ ಸದೆದು ವೇದಗಳ ತಂದ...

ದಾಸರ ಪದ →

ನಾರಾಯಣ ಗೋವಿಂದ ಜಯಜಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಪೀಲು ಆದಿತಾಳ )ನಾರಾಯಣ ಗೋವಿಂದ ಜಯಜಯ ಪರತರ ಪರಮಾನಂದ ||ಪ||ನಕ್ತಂಚರಹರ ನವ್ಯಗುಣಾಕರ ನಾರದಗಾನವಿಲೋಲ ||ತ್ರಿಪುರಸಂಹಾರಕ ವಿಪರೀತರೂಪ ವಿಪುಲಕಲ್ಕ್ಯವತಾರ ||ದಾಸದಾಸ...

ದಾಸರ ಪದ →

ನಾರಾಯಣ ತೇ ನಮೋ ನಮೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ ಪೀಲು/ಆದಿ ತಾಳನಾರಾಯಣ ತೇ ನಮೋ ನಮೋ ಭವ ನಾರದ ಸನ್ನುತ ನಮೋ ನಮೋ || ಪಲ್ಲವಿ ||ಮುರಹರ ನಗಧರ ಮುಕುಂದ ಮಾಧವ ಗರುಡಗಮನ ಪಂಕಜ ನಾಭ ಪರಮಪುರುಷ ಭವ ಭಂಜನ ಕೇಶವ ನರಹರಿ ಶರೀ...

ದಾಸರ ಪದ →

ನಾರಾಯಣ ನಾರಾಯಣ ನಾರಾಯಣ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

ನಾರಾಯಣ ನಾರಾಯಣ ನಾರಾಯಣ ||ಪ||ನಳಿನೋದರ ನಾರದಪ್ರಿಯ ನಾಮ ಜಯ ನಾರಾಯಣ ನರಕಾಂತಕ||ಅ.ಪ||ಸುರಸಂಚಯ ಸುಖಕಾರಣ ದಿತಿಜಾಂತಕ ದೀನಶರಣ| ಪರತ ಪರ ಪಾಂಡವಪ್ರಿಯ ಪರಿಪೂರ್ಣ ಜಯ||ಅಘಕ...

ದಾಸರ ಪದ →

ನಾರಾಯಣ ನಿನ್ನ ನಂಬಿದೆ

ದಾಸರು: ಶ್ರೀಪಾದರಾಯ · ಪ್ರಕಾರ: ಪದ / ದೇವರನಾಮ

(ರಾಗಶಂಕರಾಭರಣ ಅಟ್ಟತಾಳ)ನಾರಾಯಣ ನಿನ್ನ ನಂಬಿದೆ , ಲಕ್ಷ್ಮೀ- ರಮಣ ನಿನ್ಹೊರತು ಪೊರೆವ ದೈವವೆಲ್ಲಿದೆ ||ಪ|| ನಾ ಮೀರಿ ದುಷ್ಕರ್ಮವ ಮಾಡಿದೆ ಅಪಾರಮಹಿಮ ದಯಾನಿಧೇ ||ಅ.ಪ||ನ...

ದಾಸರ ಪದ →

ನಾರಾಯಣ ನಿನ್ನ ನಾಮದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಅಸಾವೇರಿ ಅಟತಾಳ)ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ಬಾಯಿಗೆ ಬರಲಿ, ಬಾ ರಂಗ ||ಪ||ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತಾಡುವಾಗ ಕೇಡುತನದಿಂದ ಕೂಡಿ...

ದಾಸರ ಪದ →

ನಾರಾಯಣ ನಿನ್ನ ನಾಮದ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಆನಂದಭೈರವಿ. ರೂಪಕ ತಾಳ )ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ ಖೋಡಿ ವಿನೋದ...

ದಾಸರ ಪದ →

ನಾರಾಯಣ ನಿನ್ನ ನಾಮಾಮೃತವನು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸಾವೇರಿ ಛಾಪುತಾಳ)ನಾರಾಯಣ ನಿನ್ನ ನಾಮಾಮೃತವನು ನಾಲಿಗೆಯಲಿ ನಿಲಿಸಯ್ಯ ||ಪ|| ಧರಧರಾನಿಭ ಚಾರು ಶೃಂಗಾರಶೇಖರ ತರಳ ನಾರಸಿಂಹ ||ಅ.ಪ||ನಾರದಸನ್ನುತ ನೀರಜನಾಭ ಸುಹಾರ ಉದ...

ದಾಸರ ಪದ →

ನಾರಾಯಣನೆಂಬ ನಾಮವ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಬಿಲಹರಿ ಅಟತಾಳ )ನಾರಾಯಣನೆಂಬ ನಾಮವ ನಿಮ್ಮ ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ||ಪ||ಹೃದಯ ಹೊಲವ ಮಾಡಿ ಮನವ ನೇಗಿಲ ಮಾಡಿ ಶ್ವಾಸೋಚ್ಛ್ವಾಸ ಎರಡೆತ್ತು ಮಾಡಿ ಜ್ಞಾನವೆ...

ದಾಸರ ಪದ →

ನಾರಾಯಣನೆಂಬ ನಾಮವ ನೇಮದಿ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಸೌರಾಷ್ಟ್ರ. ಅಟ ತಾಳ )ನಾರಾಯಣನೆಂಬ ನಾಮವ ನೇಮದಿ ನೆನೆವುತಿರೆಚ್ಚರಿಕೆ||ಪ|| ನೀರ ಮೇಲಿನ ಗುಳ್ಳೆ ನರರೆಂಬ ಡಿಂಭವ ನಂಬದಿರೆಚ್ಚರಿಕೆ ||ಅ||ಪರರು ಮಾಡಿದ ಪಾತಕಗಳುಚ್ಚ...

ದಾಸರ ಪದ →

ನಾರಾಯಣಾಯ ನಮೋ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮಾರವಿ ಝಂಪೆ ತಾಳ )ನಾರಾಯಣಾಯ ನಮೋ ನಾರಾಯಣಾಯ ನಮೋ ನಾರಾಯಣಾಯ ನಮೋ ||ಪ||ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು ಹರಿಯ ಕೀರ್ತನೆಗಳನು ಜಗದೊಳಗೆ ಸೂಸು ಹರಿ ಭಕ್ತಿಯಿಲ್...

ದಾಸರ ಪದ →

ನಾರಿರನ್ನಳೆ ಕಂಡೆಯ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ರೇಗುಪ್ತಿ ತ್ರಿಪುಟ ತಾಳ )ನಾರಿರನ್ನಳೆ ಕಂಡೆಯ ||ಪ|| ವಾರಿಜನಾಭ ದೇವರದೇವ ಸುಗುಣ ಬೇಲೂರ ಚೆನ್ನಿಗರಾಯನ, ಎನ್ನ ಪ್ರಿಯನ ||ಅ||ಹೊಸಬಗೆ ಮಾಟದ, ಪೊಳೆವ ಕಿರೀಟದ ಎಸೆವ...

ದಾಸರ ಪದ →

ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿತ್ಯ ಪತಿಭಾವ ಶ್ರೀಲಕುಮಿದೇವಿಗಯ್ಯ ನಿತ್ಯ ಪುತ್ರಭಾವ ಬೊಮ್ಮ ಪ್ರಾಣರಿಗೆ ನಿತ್ಯ ಪೌತ್ರಭಾವ ಗರುಡ ಶೇಷ ರುದ್ರರಿಗೆ ನಿತ್ಯ ಭೃತ್ಯಭಾವ ಇಂದ್ರ ಕಾಮ ಆತ್ಮ ಜೀವರಿಗೆ ಇಂತೆಂದ...

ದಾಸರ ಪದ →

ನಿತ್ಯವಲ್ಲ ಅನಿತ್ಯ ದೇಹವಿದಣ್ಣ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ. ಛಾಪು ತಾಳ )ನಿತ್ಯವಲ್ಲ ಅನಿತ್ಯ ದೇಹವಿದಣ್ಣ ||ಪ|| ಮತ್ತೆ ಮುರಾರಿ ಕೃಷ್ಣನ ನೆನೆಯಲು ಮುಕ್ತಿಗೆ ಸಾಧನವಣ್ಣ ಪ್ರಾಣಿ ||ಅ||ಮಾನಿನಿಯರ ಕುಚಕೆ ಮರುಳಾಗದಿರು...

ದಾಸರ ಪದ →

ನಿಂದಕರಿರಬೇಕಿರಬೇಕು

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ರಾಗ - ನಾದನಾಮಕ್ರಿಯ ತಾಳ - ಆಟನಿಂದಕರಿರಬೇಕಿರಬೇಕು | ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೊ ಹಾಗೆ ||ಪಲ್ಲವಿ||ಅಂದಂದು ಮಾಡಿದ ಪಾಪವೆಂಬ ಮಲ ತಿಂದು ಹೋಗುವರಯ್ಯ ನಿಂದಕರು...

ದಾಸರ ಪದ →

ನಿನಗಾರು ಸರಿಯಿಲ್ಲ , ಎನಗನ್ಯ ಗತಿಯಿಲ್ಲ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕೇದಾರಗೌಳ ತ್ರಿಪುಟತಾಳ)ನಿನಗಾರು ಸರಿಯಿಲ್ಲ , ಎನಗನ್ಯ ಗತಿಯಿಲ್ಲ ನಿನಗೂ ಎನಗೂ ನ್ಯಾಯ ಹೇಳುವರಿಲ್ಲೋ ||ಒಂದೇ ಗೂಡಿನಲ್ಲಿದ್ದು ಒಂದು ಕ್ಷಣವಗಲದೆ ಎಂದೆಂದಿಗೂ ನಿನ್ನ...

ದಾಸರ ಪದ →

ನಿನಗೇನು ಘನವೇನು ವನಜಾಕ್ಷ ವೇಂಕಟೇಶ

ದಾಸರು: ಇತರೆ · ಪ್ರಕಾರ: ಪದ / ದೇವರನಾಮ

(ಸಾರಂಗ ರಾಗ , ಆದಿತಾಳ)ನಿನಗೇನು ಘನವೇನು ವನಜಾಕ್ಷ ವೇಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ||ಪ||ದೇಶ ನಿನ್ನದು ಬಹುಕೋಶ ನಿನ್ನದು ಜಗ- ದೀಶ ನಿನ್ನನು ಭಾಗ್ಯ ಲಕುಮಿ...

ದಾಸರ ಪದ →

ನಿನ್ನ ಆಶ್ರಯಿಸುವೆನು ನಿಗಮಗೋಚರ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಲ್ಯಾಣಿ. ಝಂಪೆ ತಾಳ )ನಿನ್ನ ಆಶ್ರಯಿಸುವೆನು ನಿಗಮಗೋಚರ ನಿತ್ಯ ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೋ ||ಪ||ಕುಂದಣದ ಆಶ್ರಯ ನವರತ್ನಗಳಿಗೆಲ್ಲ ಚಂದಿರನ ಆಶ್ರಯ ಚಕೋರಗೆ...

ದಾಸರ ಪದ →

ನಿನ್ನ ಒಲುಮೆಗೆ ನಾನು ಈಡೇನೊ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಕಾಂಭೋಜ ಝಂಪೆತಾಳ )ನಿನ್ನ ಒಲುಮೆಗೆ ನಾನು ಈಡೇನೊ ರಂಗ ||ಪ|| ಸಣ್ಣವನು ನಾನಯ್ಯ ಪನ್ನಗಾಚಲವಾಸ ||ಅ||ಅಜಿತ ನಾಮಕ ನೀನು, ಅಲ್ಪ ಶಕ್ತನು ನಾನು ಕುಜನ ದೂಷಕ ನೀನು, ಅವರ...

ದಾಸರ ಪದ →

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ ನಿನ್ನದೇ ಸಕಲ ಸಂಪತ್ತು ||ಪಲ್ಲವಿ||ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಊರ...

ದಾಸರ ಪದ →

ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿನ್ನ ಕಾಲ್ಹೆಜ್ಜೆಯ ಪಿಡಿದು ನಾ ನಿಲ್ಲುವೆ ನಿನ್ನ ಪಂಜು ಹಿಡಿದು ಒಡ್ಡಿ ಬೊಬ್ಬಿಡುವೆ ನಿನ್ನ ಛತ್ರಚಾಮರ ಪಿಡಿದೇಳುವೆ ನೀರು ನಿವಾಳಿಸಿಕೊಂಡು ಕೊಬ್ಬುವೆನು ಬಿಡೆನು ಬಿಡೆನ...

ದಾಸರ ಪದ →

ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

(ರಾಗ ಮೋಹನ ಅಟ ತಾಳ )ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ ಮುನ್ನೇನು ಗತಿಯು ಎನಗೆ ||ಪ|| ಚೆನ್ನಾರ ಚೆಲುವ ಕೇಶವರಾಯ ನಂಬಿದೆನೊ ಧನ್ಯನ ಮಾಡಿ ಸಲಹೋ ದೇವ ||ಅ||ಅರಿಯೆನೋ...

ದಾಸರ ಪದ →

ನಿನ್ನ ದರುಶನಕೆ ಬಂದವನಲ್ಲವೊ

ದಾಸರು: ವಿಜಯದಾಸ · ಪ್ರಕಾರ: ಪದ / ದೇವರನಾಮ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ||ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು...

ದಾಸರ ಪದ →

ನಿನ್ನ ದಾಸನಾಗಿ ನಿನ್ನ ಎಂಜಲನುಂಡು

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ನಿನ್ನ ದಾಸನಾಗಿ ನಿನ್ನ ಎಂಜಲನುಂಡು ನೀನುದಾಸೀನಮಾಡಿದರೆ ಲೋಕರು ನಗರೇ ನಿನ್ನ ಚರಣಕಮಲವನು ಕೊರಳಲಿ ಕಟ್ಟುವೆ ಪುರಂದರವಿಠಲ||

ದಾಸರ ಪದ →