Sampada Logo

ಕೆ.ಪಿ.ಅಶ್ವಿನ್ ರಾವ್

೪೦ ಅರಳಿಕಟ್ಟೆಯ ಮಾತುಗಳು

ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

ashwinrao47

೫೦ ಪೋಸ್ಟ್‌ಗಳು ೨೧ ಅನುಯಾಯಿಗಳು
ಸೇರಿದ ದಿನಾಂಕ: ಶುಕ್ರವಾರ, ಜನವರಿ ೧೭, ೨೦೨೦
ಕೆ.ಪಿ.ಅಶ್ವಿನ್ ರಾವ್
ಇನ್ನೂ ಓದಿಲ್ಲ. ಸದ್ಯದಲ್ಲೇ ಖರೀದಿಸಿ ಓದಬೇಕೆಂಬಾಸೆ ಇದೆ.
೩
ಕೆ.ಪಿ.ಅಶ್ವಿನ್ ರಾವ್
ಅನುಕರಣ ಪದಗಳನ್ನು ಬಳಸುತ್ತಲೇ ಇರುತ್ತೇನೆ. ಆದರೆ ಅದರ ಬಗ್ಗೆ ಯೋಚನೆ ಮಾಡಿರಲೇ ಇಲ್ಲ.
೯
ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್
ನಮ್ಮ ಕರಾವಳಿ ಕರ್ನಾಟಕದಲ್ಲಿ (ಮಂಗಳೂರು) ನಾವು ಮಾತನಾಡುವಾಗ ಹೆಚ್ಚಾಗಿ 'ಬೇಗದಲ್ಲಿ ಸಿಗುವ' ಬೇಗನೇ ಬಾ ಎನ್ನುತ್ತೇವೆ. ಅದೇ ಗುಂಗಿನಲ್ಲಿ ಬೇಗದಲ್ಲೇ ಪದವನ್ನು ಬಳಸಿದೆ ಅನಿಸುತ್ತೆ. ಕರ್ನಾಟಕದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯ ಸೊಗಸೇ ಚಂದ. ಒಂದೇ ಅರ್ಥ ನೀಡುವ ಎಷ್ಟೋಂದು ಪದಗಳಿವೆ ಅಲ್ಲವೇ? ಪ್ರತಿಕ್ರಿಯೆಗೆ ಕೃತಜ್ಞತೆಗಳು
೧೨
ಕೆ.ಪಿ.ಅಶ್ವಿನ್ ರಾವ್
ರಾಜ್ಯೋತ್ಸವದ ಶುಭಾಶಯಗಳು. 'ಸಂಪದ' ಕ್ಕೆ ಬರೆಯುವಾಗ ನಿಘಂಟು ಹುಡುಕಾಡಬೇಕಿಲ್ಲ. ಸಂಪದ ಲೇಖನ ಬರೆಯುವ ಪುಟದಲ್ಲೇ ನಿಘಂಟು ಇದೆ. ಅರ್ಥಕ್ಕಾಗಿ ಹುಡುಕಾಡಬೇಕಿಲ್ಲ. ಕೂಡಲೇ ಸಂದೇಹವಿರುವ ಪದದ ಅರ್ಥವನ್ನು ನಿಘಂಟು ಬಳಸಿ ಹುಡುಕಬಹುದು. ಇದರಿಂದ ಭಾಷಾ ಜ್ಞಾನವು ವೃದ್ಧಿಯಾಗುತ್ತದೆ.
೨೨
ಕೆ.ಪಿ.ಅಶ್ವಿನ್ ರಾವ್
ಬಹಳ ಉತ್ತಮ ಕೆಲಸ. ಇದಕ್ಕಿಂತ ದೊಡ್ದ ಸೇವೆ ಬೇರೆ ಯಾವುದೂ ಇಲ್ಲ. ಒಂದು ಅನ್ನದಾನ ಮತ್ತೊಂದು ಪುಸ್ತಕ ದಾನ. ಇವೆರಡೂ ಅತ್ಯುತ್ತಮ ದಾನಗಳು. ಇನ್ನಷ್ಟು ಮಂದಿ ಶಾಲೆಗೆ ಪುಸ್ತಕ ಉಡುಗೊರೆ ನೀಡಲು ಮುಂದೆ ಬರಲಿ ಎನ್ನುವುದೇ ಹಾರೈಕೆ.
೩೩
ಕೆ.ಪಿ.ಅಶ್ವಿನ್ ರಾವ್
ತೇಜಸ್ವಿಯವರ ಜುಗಾರಿ ಕ್ರಾಸ್, ಕರ್ವಾಲೋ ಕಾದಂಬರಿಗಳನ್ನು ಓದಿರುವೆ. ಚಿದಂಬರ ರಹಸ್ಯ ಓದಿಲ್ಲ. ಬೇಗನೇ ಖರೀದಿಸಿ ಓದುವೆ.
೨೮
ಕೆ.ಪಿ.ಅಶ್ವಿನ್ ರಾವ್
ಅಪರೂಪಕ್ಕೆ ಸಿಗುವವರನ್ನು ಅತ್ತಿ ಕಾಯಿಯ ಹೂವಂತೆ ಆಗಿ ಬಿಟ್ಟಿರುವೆ ಎಂದು ಕರೆಯುವುದು ವಾಡಿಕೆ. ಏಕೆಂದರೆ ಅತ್ತಿ ಕಾಯಿಯ ಹೂವು ಕಾಣಸಿಗುವುದೇ ಇಲ್ಲ. ಪರಾಗಸ್ಪರ್ಷದ ಬಗ್ಗೆ ನನಗೆ ಅಷ್ಟಾಗಿ ಮಾಹಿತಿ ಇಲ್ಲ. ಯಾವುದೋ ಕೀಟ ಪರಾಗಸ್ಪರ್ಷ ಮಾಡುವಾಗ ತನ್ನ ಮೊಟ್ಟೆಗಳನ್ನು ಅದರೊಳಗೆ ಇಟ್ಟು ಬಿಡುತ್ತದೆ, ಕಾಯಿ ಬಲಿತಾಗ ಅದನ್ನು ಒಡೆದು ಜೀವಂತ ಕೀಟಗಳು ಹೊರಬರುತ್ತವೆ ಎಂದು ಎಲ್ಲೋ ಓದಿದ ನೆನಪು. ಬಲಿತ ಅತ್ತಿ ಕಾಯಿಯನ್ನು ತುಂಡರಿಸಿದಾಗ ಅದರ ಒಳಗೆ ಜೀವಂತ ಕೀಟಗಳು ಇರುವುದನ್ನು ಗಮನಿಸಬಹುದು.
೩೭
ಕೆ.ಪಿ.ಅಶ್ವಿನ್ ರಾವ್
ತುಂಬಾ ಸಂತೋಷದ ಸಂಗತಿ. ಅಭಿನಂದನೆಗಳು ಸುಹಾಸ್ ಯತಿರಾಜ್ ರವರಿಗೆ. ಮುಂದಿನ ಪ್ಯಾರಾ ಒಲಂಪಿಕ್ಸ್ ನಲ್ಲೂ ನೀವು ಪದಕ ಗೆದ್ದು ತನ್ನಿ.
೫೩
ಕೆ.ಪಿ.ಅಶ್ವಿನ್ ರಾವ್
ಕೆ.ಪಿ.ಅಶ್ವಿನ್ ರಾವ್
ಹೌದು, ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ ಕೃತಿಯ ಪ್ರತಿಗಳ ಲಭ್ಯತೆ ಕಡಿಮೆ. ಇದು ಹೊಸ ಉದ್ದಿಮೆಯನ್ನು ಪ್ರಾರಂಭಿಸುವವರಿಗೆ 'ಬೂಸ್ಟ್' ನೀಡುವ ಕೃತಿ ಎಂದರೆ ತಪ್ಪಾಗಲಾರದು. ಇಂದೇ 'ಸಂಪದ ಅಂಗಡಿ'ಯಿಂದ ಖರೀದಿಸಿ.
೬೪
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಮಾತು ನಿಜ ಸರ್, ಮೊದಲು ಮನೆಗೇ ಬಂದು ತಾಮ್ರದ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ಕಲಾಯಿ ಹಾಕಿಸಿ ತಂದುಕೊಡುತ್ತಿದ್ದರು. ಈಗ ಎಷ್ಟು ಹುಡುಕಿದರೂ ಜನ ಸಿಗುತ್ತಿಲ್ಲ. ಈ ಒಂದು ಕಲೆ ಕ್ರಮೇಣ ನಶಿಸಿಯೇ ಹೋಗ ಬಹುದೇನೋ?
೭೧
ಕೆ.ಪಿ.ಅಶ್ವಿನ್ ರಾವ್
ಪರ್ವ ಪೂರ್ತಿಯಾಗಿ ಓದಿಲ್ಲ. ಆದರೆ 'ಪರ್ವ' ದಲ್ಲಿ ಕಂಡು ಬರುವ ಶ್ರೀಕೃಷ್ಣ ಹಾಗೂ ಗಾಂಧಾರಿಯ ನಡುವಿನ ಸಂಭಾಷಣೆ ಅತ್ಯದ್ಭುತ. ಎಸ್ ಎಲ್ ಭೈರಪ್ಪನವರು ಬಹಳ ಮನೋಜ್ಞವಾಗಿ ಈ ಅಧ್ಯಾಯವನ್ನು ಬರೆದಿದ್ದಾರೆ. ಪೂರ್ತಿಯಾಗಿ 'ಪರ್ವ' ಓದುವ ಮನಸ್ಸಿದೆ. ಆದರೆ ಕಾಲ ಕೂಡಿಬರಬೇಕಷ್ಟೇ...
೭೦
ಕೆ.ಪಿ.ಅಶ್ವಿನ್ ರಾವ್
ಹುಡುಕಾಟ ಜಾರಿಯಲ್ಲಿದೆ ಸರ್. ಗ್ರಂಥಾಲಯ ಬಂದ್ ಆಗಿ ತುಂಬಾ ವರ್ಷಗಳೇ ಆದವು. ರದ್ದಿಗೆ ಕೊಟ್ರೋ ಏನೋ?
೮೩
ಕೆ.ಪಿ.ಅಶ್ವಿನ್ ರಾವ್
ಸರ್, ನಿಮ್ಮ ಪೋಸ್ಟ್ ನೋಡಿ ಭೈರಪ್ಪನವರ 'ಮಂದ್ರ' ಓದುವ ಮನಸ್ಸಾಗಿದೆ. ಆದರೆ ಅದರ ಗಾತ್ರ ನೋಡಿ ಮಾತ್ರ ಗಾಬರಿಯಾಗುತ್ತಿದೆ. ಆದ್ರೂ ಪ್ರಯತ್ನಿಸುವೆ...
೬೫
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಮಾತುಗಳಿಗೆ ಧನ್ಯವಾದಗಳು ಸರ್, ವಿವಿಧ ಪ್ರಕಾಶಕರನ್ನು ಸಂಪರ್ಕಿಸುವ ಕೆಲಸ ಜಾರಿಯಲ್ಲಿದೆ. ನಿಮ್ಮ ಆಸೆಯಂತೆ ಗಿರಿಮನೆ ಶ್ಯಾಮರಾವ್ ಅವರ ಪುಸ್ತಕಗಳು ಸದ್ಯದಲ್ಲೇ 'ಸಂಪದ' ಪುಸ್ತಕ ಅಂಗಡಿಯಲ್ಲಿ ಲಭ್ಯವಾಗಲಿವೆ. ಓದಿರಿ... ಖರೀದಿಸಿರಿ...
೭೫
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಮಾತು ನಿಜ ಸರ್, ಹಕ್ಕಿಗಳು ತಿನ್ನುವ ಹಣ್ಣು ಮರಗಳ ಸಂಖ್ಯೆ ಕಾಡಿನಲ್ಲಿ ಕಡಿಮೆಯಾಗಿವೆ. ಈ ಕಾರಣದಿಂದಲೇ ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳು ನಗರಕ್ಕೆ ಬರುತ್ತಿವೆ. ಮಾನವರು ತಿನ್ನದ ಹಕ್ಕಿಗಳು ಮಾತ್ರ ತಿನ್ನುವ ಮರಗಳನ್ನು ಕಾಡಿನಲ್ಲಿ ಬೆಳೆಸುವಂತಾಗಬೇಕು. ಶ್ರೀಗಂಧದ ಕೊರತೆ ಈಗ ರಾಜ್ಯ ಸರಕಾರವನ್ನೂ ಕಾಡತೊಡಗಿದೆ ಅನಿಸುತ್ತೆ. ಅದಕ್ಕಾಗಿ ಅದನ್ನು ಬೆಳೆಸುವಲ್ಲಿದ್ದ ಕೆಲವೊಂದು ಕಾನೂನುಗಳನ್ನು ಬದಲಾಯಿಸಲಾಗಿದೆ ಎಂದು ಸುದ್ದಿ ಇದೆ. ಬಲ್ಲವರು ತಿಳಿಸಬೇಕು
೭೩
ಕೆ.ಪಿ.ಅಶ್ವಿನ್ ರಾವ್
ಹೌದು ಸರ್, ನಿನ್ನೆ ಎಲ್ಲಾ ಬ್ಯಾಂಕ್ ಗಳು (ಖಾಸಗಿಯೂ ಸೇರಿ) ತೆರೆದಿದ್ದವು. ಬಹುಷಃ ಇಂದಿನಿಂದ ಮೂರು ದಿನ ರಜೆ ಇರುತ್ತೆ ಎಂಬ ಕಾರಣಕ್ಕಿರಬೇಕು.
೭೯
ಕೆ.ಪಿ.ಅಶ್ವಿನ್ ರಾವ್
ಇದೀಗ ಬಂದ ಸುದ್ದಿ. ಮೂರು ದಿನಗಳ ಬ್ಯಾಂಕ್ ಮುಷ್ಕರ ರದ್ದಾಗಿದೆ. ಆದರೂ ನಾನು ಎತ್ತಿದ ಪ್ರಶ್ನೆಗಳು ಪ್ರಸ್ತುತವಾಗಿವೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಷ್ಕರ ನಡೆದಾಗ ಜನ ಸಾಮಾನ್ಯರು ಎಷ್ಟು ತೊಂದರೆ ಅನುಭವಿಸಬಹುದು?
೮೫
ಹರಿ ಪ್ರಸಾದ್ ನಾಡಿಗ್ ಹರಿ ಪ್ರಸಾದ್ ನಾಡಿಗ್ ಪ್ರತಿಕ್ರಿಯಿಸಿದ್ದಾರೆ
ಎಚ್ ಡಿ ಎಫ್ ಸಿ ಯವರು ನಿನ್ನೆ ಕೆಲಸ ಮಾಡಿದ್ದರು - ಬ್ಯಾಂಕು ತೆರೆದಿತ್ತು. ಬಹುಶಃ ಮುಷ್ಕರ ಇರುತ್ತದೆ ಎಂದು ಇರಬಹುದು.
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ನಿಮ್ಮ ಮಾತು ನಿಜ ಸರ್, ಪ್ರಕೃತಿಯಲ್ಲಿರುವ ನೂರಾರು ವಿಸ್ಮಯಗಳಲ್ಲಿ ಇವೂ ಒಂದು. ವಿಜ್ಞಾನದ ವಿದ್ಯಾರ್ಥಿಯಾದುದರಿಂದ ಇದನ್ನು ಹಿಂದೆಯೇ ಓದಿಕೊಂಡಿದ್ದೆ. ನಿಮ್ಮ ಬರಹದಿಂದ ಮತ್ತೆ ನೆನಪಾಯಿತು. ಉತ್ತರ ಭಾರತದ ಬಹಳಷ್ಟು ಕಡೆ ಗೇರು ಬೀಜವು ಹಣ್ಣಿನ ಒಳಗಡೆ (ಸೇಬು, ಮಾವಿನಹಣ್ಣು ಇದ್ದಂತೆ) ಇರುವುದೆಂದೇ ಈಗಲೂ ನಂಬಿದ್ದಾರೆ.
೭೭