ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೮ ಲೇಖನಗಳು

ನವೆಂ ೧೨

ದೀಪವಾಗಬೇಕು

ನಾನೊಂದು ಉರಿಯುವ ದೀಪವಾಗಬೇಕು ಬೆಳಗದಿದ್ದರೂ ನಾ ಜಗವನು ಸ್ವಲ್ಪ ಸಮಯವಾದರೂ ಉರಿದು ಕತ್ತಲೆಯನು ತೊಲಗಿಸಬೇಕು ಚಿಕ್ಕ ದೀಪವಾದರೂ ನಾನು ಎದುರಿಸಿ ಬಿರುಗಾಳಿಯ ಸುಳಿಯನು ಸಿಡಿಲು ಮಳೆಯ ಬಿರುಸನು ಆರದೆ, ಉರಿಯುತಿರಬೇಕು ಚಿಕ್ಕ ದೀಪವಾದರೂ ನಾನು ಕತ್ತಲ...

Pramitha R · ೪೧೨ ವೀಕ್ಷಣೆಗಳು
ಓದಿ
ನವೆಂ ೧೧

ಭಾನುವಿಗೆ ಮೊದಲೆದ್ದು ದೀಪ ಹಚ್ಚಿಟ್ಟಿದ್ದು...

ಭಾನುವಿಗೆ ಮೊದಲೆದ್ದು ದೀಪ ಹಚ್ಚಿಟ್ಟಿದ್ದು ಸಿಡಿಸುತ್ತ ಸಿಡಿಮದ್ದು ಬೆಳಕು ಶಬ್ದದ ಸದ್ದು ತಮದೈತ್ಯ ಒಳಗಿದ್ದು ಜ್ಞಾನರವಿ ಮರೆಸಿದ್ದು ನರಕಾರಿ ಕೊಂದಿದ್ದು ಮನುಜಬಯಸಿದ್ದು ವಾಮನರಲ್ಲ ನಾವ್ ತಿವಿಕ್ರಮ ಪ್ರವೃತ್ತಿಬಲಿಮಸ್ತಕ ವಿಧ್ವoಸಕರನೊತ್ತಿ ಕೃ...

Maalu · ೨೭೪ ವೀಕ್ಷಣೆಗಳು
ನವೆಂ ೧೧

ವನಿತೆಯರು ದೀಪವನು...

ವನಿತೆಯರು ದೀಪವನು ಬೆಳಗಿಹರು ಇಲ್ಲಿ ದಿವ್ಯ ದೀಪಾವಳಿಯ ಶುಭ ಸಂಜೆಯಲ್ಲಿ ಜಗದ ಚಿತ್ತಾರವನು ಬಿಡಿಸಿಹರು ಇಲ್ಲಿ ಬಣ್ಣ ಬಣ್ಣಗಳ ರಂಗೋಲೆಯಲ್ಲಿ ದೇವ ನಮಗೆ ನಿನ್ನ ಕೃಪೆಯಾಗಲಿ ದುಃಖ ದುಮ್ಮಾನಗಳ ಕೊನೆಯಾಗಲಿ ಸುಖ ಸುಮ್ಮಾನಗಳ ಹೊಳೆಯಾಗಲಿ -ಮಾಲು

Maalu · ೨೮೨ ವೀಕ್ಷಣೆಗಳು
ನವೆಂ ೧೧

ದಿವ್ಯ ದೀಪಾವಳಿಯ....

ನೆನಪುಗಳು ಮಾಸದವು ಕನಸಿನ ಹಾಗೆ! ಗೆಳೆಯ, ನಾ ನಿನ್ನ ಮರೆಯುವುದು ಹೇಗೆ?! ಬೊಗಸೆಯಲಿ ಭರವಸೆಯ ಹಿಡಿದು ತಂದವನೆ ಬದುಕಿನಲಿ ನನ್ನೊಡನೆ ನಡೆವೆ ಎಂದವನೆ ದೀಪ ಹಚ್ಚುವೆ ಮತ್ತೆ ನಿನ್ನ ನೆನಪಲ್ಲಿ ದಿವ್ಯ ದೀಪಾವಳಿಯ ಈ ಶುಭ ಸಮಯದಲ್ಲಿ -ಮಾಲು

Maalu · ೩೧೩ ವೀಕ್ಷಣೆಗಳು
ಕಂದನಿಗಾಗಿ
ನವೆಂ ೧೧

ಕಂದನಿಗಾಗಿ

ರವಿಯು ಮೋಡಿ ಇರುಳು ಕರಗಿ ಬೆಳಕು ಬಂದಿದೆ ಭೂಮಿಗೆ ಒಲವ ಕಂದನೇ ಮಡಿಲ ತುಂಬಿ ಹರುಷ ತಂದಿಹೆ ಬಾಳಿಗೇ. ನಿನ್ನ ನಗುವೂ ನಿನ್ನ ಅಳುವೂ ಎಲ್ಲ ನನಗೆ ನೂತನ ನಿನ್ನ ಹಡೆದೆ , ಅಮ್ಮನಾದೆ ನನ್ನಲೇನೋ ಹಿರಿತನ. ಒಡಲ ತುಂಬಾ ಒಲವು ತುಂಬಿ ಸುರಿಯುತಿಹುದೂ ಹಾಲಿ...

ಅರುಣಾ ಜಿ ಭಟ್.,ಬದಿಕೋಡಿ · ೬೮೮ ವೀಕ್ಷಣೆಗಳು
ನವೆಂ ೧೦

ಜಿಮ್ಮಿ

ನಮ್ಮ ಮನೆ ನಾಯಿ, ಜಿಮ್ಮಿ. ಅಮ್ಮನ ಮುದ್ದಿನ ಗೆಳೆಯ. ಆವಳೆ ಹೆಚ್ಚು ಸಮಯ ಕಳೆಯೋದು ಅದರ ಜೊತೆ. ಜಿಮ್ಮಿ, ಅವಳ ಮಾತು ಯಾವಗಲು ಕೇಳುತ್ತಾನೆ ಮತ್ತು ಹೆಚ್ಚು ಪ್ರೀತಿ . ಆವನು ಹೆಚ್ಚು ಸೋಮಾರಿಯೆನಲ್ಲ, ಅದರೆ ಅವನದು ಆರಾಮದ ಜೀವೆನ. ನನಗೆ ಅವನ ಮೇಲೆ ಕ...

ಸಂಕಲ್ಪ ಎಸ್.ಬಿ · ೩೪೮ ವೀಕ್ಷಣೆಗಳು
ನವೆಂ ೧೦

ಕೈಲಾಸ ಯಾವುದಯ್ಯ?

ಕಾಯಕವೇ ಕೈಲಾಸ ಎನುವ ಶ್ರಮಜೀವಿಗಳಿಗೆ ಕೆಲಸವೊಂದೇ ಸಾಕು ಇರಲು ನಿಶ್ಚಿಂತೆ. ಕಾಸಿದ್ದರೆ ಕೈಲಾಸ ಎನುವ ಆಲಸಿಗಳಿಗೆ ಕೆಲಸ ಮಾಡದೆ ಕಾಸುಗಳಿಸುವ ಚಿಂತೆ. ಶಾರಿಸುತೆ.

ಸರಸ್ವತಿ ಟಿ. ಎನ್ · ೫೯೨ ವೀಕ್ಷಣೆಗಳು
ನವೆಂ ೦೯

ಗುಡಿಯಾಗ್ ಇರೋ ದ್ಯಾವರ್ಗ್ ಮಾಡ್ಸಿ...

ಗುಡಿಯಾಗ್ ಇರೋ ದ್ಯಾವರ್ಗ್ ಮಾಡ್ಸಿ ಆಲು ಮೊಸರ್ ಸ್ನಾನ! ಇಕ್ಕತಾರ್ ಅವನ್ಮುಂದ್ ತಿನ್ನಾಕ್ಕಂತ ತುಪ್ಪ್ದಲ್ ಅದ್ ಬಣ್ದನ್ನ! ಗುಡಿಯಾಗ್ ಮುಂದಾ ಬಿಕ್ಸಾ ಎತ್ತಾ ಕುಂತ್ಕನ್ಡವ್ರೊಟ್ಟೆಗ್ ದೋಕ! ಮತ್ತಾ ಕಿಸ್ನ ಬೂಮ್ಯಾಗ್ ಬತ್ತಾನಂತೆ ಕೇಳ್ತೀನ್ ಅವನ್ಗೆ...

Maalu · ೨೭೩ ವೀಕ್ಷಣೆಗಳು
ನವೆಂ ೦೯

ಹೆಣ್ಣು-ಹೊನ್ನು-ಮಣ್ಣು

ಹೆಣ್ಣು-ಹೊನ್ನು-ಮಣ್ಣು ಮೇಲೇಕೆ ಎಲ್ಲರ ಕಣ್ಣು ಹಿಂದೆ ಬಿದ್ದವರು ಮಣ್ಣು ಸೇರಿದರು ತಿಳಿದೂ ನಡೆಸುವರೇಕೆ? ಅದಕ್ಕಾಗಿ ಹೋರಾಟ ಕಲಿಯಲಿಲ್ಲವೇಕೆ ಹಳೆಯ ತಪ್ಪಿನಿಂದ ಪಾಠ. ಶಾರಿಸುತೆ

ಸರಸ್ವತಿ ಟಿ. ಎನ್ · ೫೨೨ ವೀಕ್ಷಣೆಗಳು
ನವೆಂ ೦೯

(ಕು)ಚುಟುಕುಗಳು

@ಮಾರಾಟದ ಸರಕು@ಮನೆಯೊಳಗೆ ನಡೆಯುತ್ತಿತ್ತು ಮಾರಾಮಾರಿ,ಶಾಂತಿ ಸ್ಪೂರ್ತಿಯೂ ಬಂತು ಅವಳನ್ನು ಮಾರಿ !! ***@ಭೂಕಂಪ @ದಿನವೂ ತೊಪತೊಪನೆ ಉದುರುವ ಪಾತ್ರೆಗಳ ಸದ್ದಿನೊಡನೆ ರಾಜಿ ಮಾಡಿಕೊಂಡಾತನಿಗೆ ಭೂಕಂಪ ಮಹದೆನಿಸಲೇ ಇಲ್ಲ !! ***

ರವಿಕಿರಣ್ ಭಟ್ · ೮೧೨ ವೀಕ್ಷಣೆಗಳು
ನವೆಂ ೦೮

ವರ‌

ಸಹಜ ಮರೆವು ದೇವರು ಕೊಟ್ಟ ವರವು ಮರಯಲಾಗದಂತಿದ್ದರೆ ನಾವು ಜೀವನದ ಕಹಿ ನೋವು ಮರೀಚಿಕೆಯಾಗುತಿತ್ತು ನಲಿವು ಬದುಕಿಗಿಂತ ಪ್ರಿಯವೆನಿಸುತಿತ್ತು ಸಾವು. ಶಾರಿಸುತೆ

ಸರಸ್ವತಿ ಟಿ. ಎನ್ · ೫೨೩ ವೀಕ್ಷಣೆಗಳು