ಕಗ್ಗ- ೧೪
ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ|ನೊಂದಬೇಕೆಂದಿರ್ದೊಡಿಂಗೆ ಮೊದಲನಿಡು||ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ|ಹೊಂದು ವಿಶ್ವಾತ್ಮತೆಯ-ಮಂಕುತಿಮ್ಮ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೨೩ ಲೇಖನಗಳು
ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ|ನೊಂದಬೇಕೆಂದಿರ್ದೊಡಿಂಗೆ ಮೊದಲನಿಡು||ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ|ಹೊಂದು ವಿಶ್ವಾತ್ಮತೆಯ-ಮಂಕುತಿಮ್ಮ||
ತನಗೆ ಬಾರದ ಲಾಭ ತನಯಂಗೆ ಬಂದಾಗ|ಜನಕನ್ ಅದು ತನದೆಂದು ಸಂತಸಿಪ ತೆರದಿ||ಜನದೊಳಾರ್ಗಾವ ಸೊಗವಾದೊಡಂ ತನ್ನದೆನ್ನು|ತನುಭವಿಪನೋ ಜ್ಞಾನಿ- ಮಂಕುತಿಮ್ಮ||
ತನ್ನ ಮನದಾಟಗಳ ತಾನೆ ನೋಡುತ ನಗುವ|ತನ್ನೊಳಗೆ ತಾನಿರ್ವರಾದವೊಲು ಬಾಳ್ವ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ|ಧನ್ಯತೆಯ ಕಂಡವನು -ಮಂಕುತಿಮ್ಮ||
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ||ಆವುದೋ ಕುಶಲಯದೊಂದಿರದೆ ಜಯವಿರದು|ಆ ವಿವರ ನಿನ್ನೊಳಗೆ- ಮಂಕುತಿಮ್ಮ||
ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು|ಬಳುಕ ಹಗ್ಗದ ಮೇಲೆ ತಾನಡಿಯನಿಡುತ||ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ|ಕಲೆಯೆ ಜೀವನಯೋಗ-ಮಂಕುತಿಮ್ಮ||
ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|ವಹಿಸೆ ಜೀವನಭರವನದು ಹಗುರೆನಿಪವೊಲ್||ಸಹನೆ ಸಮರಸಭಾವವಂತ: ಪರೀಕ್ಷೆಗಳು|ವಿಹಿತವಾತ್ಮದ ಹಿತಕೆ- ಮಂಕುತಿಮ್ಮ||
ಎಲ್ಲ ನಾಶನವೆಲ್ಲ ಕಾಲವಶವಾದೊಡಂ| ಕ್ಷುಲಕನು ನರನಾದೊಡಂ ಕಾಲನಿದಿರೊಳ್||ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು|ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ||
ಅಣುಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು|ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು||ಉಣಿಸನೀವನು ದನಕೆ, ತಣಿವನೀವನು ಜಗಕೆ|ಗುಣಶಾಲಿ ತೃಣಸಾಧು- ಮಂಕುತಿಮ್ಮ||
ಪರಹಿತದ ಮಾತಿರಲಿ; ಪರರಿನೇ ಜೀವಿಪನು|ನರಜಂತು, ಪಶು ಪಕ್ಷಿ ಕೀಟ ಮೀನ್ ಗಳವೋಲ್||ಪರರಿನೆಳಸದದೇನನುಂ ಪರರಿಗುಪಕರಿಪ|ತರುಜನ್ಮವಲ್ ಪುಣ್ಯ!-ಮಂಕುತಿಮ್ಮ
ನೆರಳನಿನಿತನು ಕೊಡುವ, ದಣಿವನಿನಿತು ಕಳೆವ|ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ||ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ|ಪರಧರ್ಮವದೆಲವೋ- ಮಂಕುತಿಮ್ಮ||
ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ 'ಕೊಂಚ ಕೊಂಚ' ಅರ್ಥವಾದರೂ, ಹಿಂದಿ 'ಸುಟ್ಟು ತಿನ್ನಲಿಕ್ಕೂ' ಬರುವುದಿಲ್ಲ....
ನಮ್ಮ ದೇಶದ ಬಹುತೇಕರು ಪೂಜಿಸುವ ಪ್ರಾಣಿ ಗೋವು. ಗೋವುಗಳನ್ನೇ ಭಕ್ಷಿಸುವ ಪ್ರಾಣಿ ಹುಲಿ. ಆದರೆ ನಮ್ಮ ರಾಷ್ಟ್ರೀಯ ಪ್ರಾಣಿ ಆ ಪೂಜನೀಯವಾದ ಗೋವು ಅಲ್ಲ. ನಮ್ಮ ರಾಷ್ಟ್ರೀಯ ಪ್ರಾಣಿ ಆ ಗೋವುಗಳನ್ನೇ ಭಕ್ಷಿಸುವ ಹುಲಿ. ಈ ದೇಶದಲ...
ಮಲೆನಾಡಂಚಿನ ಮೆದುವಿಳೆಯಲ್ಲಿ ಮಲರೆಲೆ ಮೆಲ್ಲನೆ ಮುದುಡುತಿದೆ ಮುನಿಸುರಗದ ಮಡು ಮರಣ ಮೃದಂಗದಿ ಮನುಜರ ಮುಡಿಗೆಡವಿಕ್ಕುತಿದೆ.. ಮಾವೋ ಮಹಿಪನ ಮಾತಿಗೆ ಮೈಮರೆತೆದ್ದಿಹ ಮಲೆಮಕ್ಕಳ ಮರುಳು ಮಲೆಮರಗಳ ಮಧುವತ್ತರ ಮಡಿ ಮೈನೆತ್ತರ ಮ...
ಸದ್ಗುಣಿ ಕೂಸೊಂದಿರುವುದೆ ಮಿಗಿಲುಬುದ್ಧಿಗೇಡಿ ನೂರಿರುವುದಕಿಂತ; ಚುಕ್ಕಿ ಸಾಸಿರವು ಕಳೆಯದ ಕತ್ತಲುಚಂದ್ರನೊಬ್ಬನೇ ಕಳೆಯುವನು!ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ...
ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು ಊರ ತುಂಬ ಅಂಟಿಸಿರುವ ಪೋಸ್ಟರ್‌ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ... ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ ಇದ...
ಗೋಡೆ ಎಂಬುದು ಬಯಲೊಳಗೆ ಬದುಕು ಕಟ್ಟಿಕೊಳ್ಳುವುದರ ಸಂಕೇತವಾಗಿ ಕಾಣುತ್ತದೆ. ಸುತ್ತಲೂ ಎದ್ದ ಗೋಡೆಯೊಳಗೇ ಮನುಷ್ಯ ತನ್ನ ಖಾಸಗೀ ಬದುಕನ್ನು ಅರಿಯುತ್ತಾನೆ. ಸ್ವಂತಿಕೆಯ ಕುಡಿಯೊಡೆದು ಕವಲಾಗಿ ಬೆಳೆಯುತ್ತಾನೆ. ಬದುಕಿಗಾಗಿ ಹೊ...
ಕನಸ ಕಣ್ಣಲೇ ಹಿಡಿದು ಮನಸಲ್ಲೇ ಮುಚ್ಚಿಟ್ಟೆಕನಸ ನನಸಾಗಿಸಲೆಂದೇ ಪರದಾಡಿಬಿಟ್ಟೆಬದುಕು ಬವಣೆಯ ನಡುವೆಕನಸೆಲ್ಲೋ ಮರೆಯಾಗಿಮನಸೆಂದೋ ಸೆರೆಯಾಗಿನನಸೆಲ್ಲಾ ಮಸುಕಾಗಿಗುರಿ ಈಗ ದೂರಾಗಿನೆನಪೆಂಬ ಬಂಧನದಲಿ ನೀನೇಕೆ ಕೂತೆ ? ನೀವು ಬ...
ಮೊನ್ನೆ ನಮ್ಮ ಕಾರ್ಯಾಲಯದ ಮಂದಿಎಲ್ಲಾ ಒಟ್ಟಾಗಿ ಸೇರಿದ್ವಿ. ಅಂದು ನಮ್ಮ ಕಾರ್ಯಾಲಯಕ್ಕೆ ೧೦ ವರುಷ ತುಂಬಿದ ಸಡಗರ. ನಾನು ಆ ಕಾರ್ಯಾಲಯವನ್ನ ಸೇರಿದಾಗ ಕನ್ನಡಿಗರ ಸಂಖ್ಯೆ ಬಹಳವಾಗಿತ್ತು. ಇದ್ದ ೨೫ ಜನರಲ್ಲಿ ೨೦ ಜನ ಕನ್ನಡಿಗ...