ಹೀಗೊಂದು ಘಜಲು...
ಸದಾ ಎನ್ನ ಮನದಲ್ಲಿ ನೀನು ಇರುವಂತೆ ತಿಳಿಯಾದ ನೀರಲ್ಲಿ ಮೀನು... ಎನ್ನ ಮನದಲ್ಲಿನಾ ನಿನ್ನ ಒಲವು ಹೊನ್ನಿನಾ ಹರಿವಾಣದಲ್ಲಿನಾ ಹೂವು... ನನ್ನ ಮನದಲ್ಲಿನಾ ನಿನ್ನ ಇರುವು ನಲುಗದಾ ನಲುಮೆಯ ನಿಲುವಿನಾ ಅರಿವು... ನನ್ನ ಮನದಲ್ಲಿನಾ ನಿನ್ನ ನೆರಳು ಎದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸದಾ ಎನ್ನ ಮನದಲ್ಲಿ ನೀನು ಇರುವಂತೆ ತಿಳಿಯಾದ ನೀರಲ್ಲಿ ಮೀನು... ಎನ್ನ ಮನದಲ್ಲಿನಾ ನಿನ್ನ ಒಲವು ಹೊನ್ನಿನಾ ಹರಿವಾಣದಲ್ಲಿನಾ ಹೂವು... ನನ್ನ ಮನದಲ್ಲಿನಾ ನಿನ್ನ ಇರುವು ನಲುಗದಾ ನಲುಮೆಯ ನಿಲುವಿನಾ ಅರಿವು... ನನ್ನ ಮನದಲ್ಲಿನಾ ನಿನ್ನ ನೆರಳು ಎದೆ...
ನೋಡಿಲ್ಲಿ ನಿನಗಾಗಿ ಹೂವೊಂದು ಅರಳಿದೆ ನೋಡಿಲ್ಲಿ ನಿನಗಾಗಿ ಹೂಮುಡಿದ ಹೆಣ್ಣಿದೆ ಗಂಡು ಹೆಣ್ಣು ಆಗಿ ನಾವ್ ಬಂದೆವು ಈ ಮಣ್ಣಿಗೆ ಗಂಡ ಹೆಂಡಿರು ಈಗ ಈ ಜಗದ ಕಣ್ಣಿಗೆ ಎತ್ತಲೋ ಹಾರಿ ಹೋದ ಹಕ್ಕಿಗಿಲ್ಲ ಬಂಧನ ಮತ್ತೆ ಅಲ್ಲಿ ಹರಿವ ಆ ನೀರಿಗೆ ಸ್ವಚ್ಛಂದನ...
ಕಾದು ಕಾದು ಕಾದುನೋಡುತ್ತಿದ್ದೆ ನಿನ್ನಇತ್ತು ಗೆಳೆಯ ಅಂದುಕಣ್ಣಲ್ಲಿ ಮಿಂಚು ನೂರು...ನೀನು ಬರುವ ದಾರಿಕಾಯುತಿಹೆನು ಇಂದುಬರಲಿಲ್ಲವೆಂದು ಇನ್ನು ಕಣ್ಣಂಚಿನಲ್ಲಿ ನೀರು...-ಮಾಲು
ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ ಸಣ್ಣಗೆ ಕೊಳಲನು ಊದುತ ಬಂದ ಚೆಲುವ ಮುಕುಂದ ಒಲವನು ತಂದ ಕನಸಲಿ ಬಂದು ಮನದೊಳುನಿಂದ ರಕ್ಕಸ ಮಾವನ ರಕ್ಕಸಿ ಪೂತನ ಚಿಕ್ಕವನಾದರು ಚೊಕ್ಕದಿ ಕೊಂದ ಗಿರಿಯನು ಎತ್ತಿದ ಉರಗವ ಮೆಟ್ಟಿದ ಜಗವನು ಪೊರೆದ ನಂದನ ಕಂದ ಅಮ್ಮ ಯಶ...
....ಗೆ ಚೆಲುವು ನಲಿಯುವ ನಿನ್ನ ಮೊಗದಲಿ ಮುಂಗುರುಳು ತೂಗಿದೆ ಗಾಳಿಗೆ ಚೆಂದ ತೋರುವ ಮಂದ ಹಾಸವು ಪಲ್ಲವಿಯು ಒಲವಿನ ಹಾಡಿಗೆ ದೀಪದಂತಿಹ ನಿನ್ನ ಕಂಗಳು ಬೆಳಕು ನನ್ನೀ ಬಾಳಿಗೆ ನೀ ಬರುವ ಕನಸನು ಕಾಣುವೆ ನನಸಾಗಿ ಬರುವೆಯ ನಾಳೆಗೆ! -ಮಾಲು
ಬದುಕುವುದು ಹೇಗೆ ಮೀನು ನೀರಿಲ್ಲದೆ ಅಂತೆಯೇ ನಾ ಇನಿಯ ನೀನಿಲ್ಲದೆ; ಪರಿತಪಿಸುವ ಬೇಗೆ ಭರಿಸಿ ಬಾಳುವುದು ಹೇಗೆ? ಬಿರಿದ ಹೂವಿಗೆ ಭ್ರಮರ ಹಾ- ತೊರೆದು ಹೋಗುವ ಹಾಗೆ ಬೆರೆತು ಬಾಳುವ ಬಯಕೆ ಬರದೆ ಏತಕೆ ಹೋದೆ? ಸರಿದು ಹೋಗುವ ಸಮಯ ಮರಳಿ ಬಾರದು ಇನಿಯ!...
ಹುಡುಗಾ, ನಿನಗೆ ಸಿಗುವವರೇ ಕೆಲವರು... ಅವರಲ್ಲಿ ಹಲವರು ನೋಟಕ್ಕಷ್ಟೇ ಸಿಗುವ ಹೆಂಗೆಳೆಯರು...! ಇನ್ನು ಉಳಿದವರು ಮದುವೆಯಾಗಿರುವ ಮಂಗಳೆಯರು...! -ಮಾಲು
ಇಹ-ಪರ ಹಗಲಲ್ಲಿ, ಪರ ಲೋಕದ ಚಿಂತೆ ಬಂಧ ಮುಕ್ತಿಗೆ ಪರಮಾತ್ಮನಿಗಾಗಿ ಜಪ ತಪ...! ಇರುಳಲ್ಲಿ, ಇಹಲೋಕದ ಚಿಂತೆ ಮುಕ್ತ ಬಂಧಕ್ಕೆ ಪರಮ ಆಪ್ತನಿಗಾಗಿ ಹಪ ಹಪ...! -ಮಾಲು
ಮತ್ತೆ ಬರದೆ ಹೋದ ಆ ಚಿಗುರು ಮೀಸೆ ಹೈದ... ಮಿಂಚಿನಂತೆ ಬಂದ 'ಚೆಲುವೆ ನೀನು' ಎಂದ ಬೊಗಸೆ ಆಸೆ ತಂದ ಮತ್ತೆಲ್ಲೋ ಮಾಯವಾದ ಆ ಚಿಗುರು ಮೀಸೆ ಹೈದ...! ಎದೆಯಲ್ಲಿ ಬಂದಿತಾಗ ಹರಯದ ಹೊಸ ರಾಗ ತಡೆಯದೆ ನಾ ಹೋದೆ ನನ್ನೆದೆಬಡಿತದ ವೇಗ! ಹುಡುಕಲೆಲ್ಲಿ ಅವನ...
ಅಮ್ಮ... ನನ್ನ ಭರಿಸಿ ನಿನ್ನೆದೆಯ ಹಾಲನುಣಿಸಿ ಬೆಳೆಸಿ, ಕೊಟ್ಟು ರೆಕ್ಕೆ ಹಾರಲು ಬಿಟ್ಟೆ ಆಘಾದ ಜೀವನದ ಆಕಾಶಕ್ಕೆ. ಅಲ್ಲಿ ಕಲಿತಿದ್ದು ಇಷ್ಟೆ - ಎದೆಗೆ ಬೆಚ್ಚಗಿಹ ತಾಣ ಒಂದೇ ಅಮ್ಮನಾ ತೋಳಿನಾ ತೆಕ್ಕೆ -ಮಾಲು
ಮಾಲು(ಗೆ)... ಆಗಸದಗಲಕ್ಕು ನಿನ್ನೊಲುಮೆ ಹರಡಿಹುದು ತಿಳಿಯಲಾರೆನು ನಾನು ಅದರ ಎಲ್ಲೆ! ಮುಗಿಲೊಳು ಕೂಡಿ ಹನಿ ಹನಿಯಾಗಿ ಸುರಿಸು ಇನಿತಿನಿತು ಒಲವ ಪಡೆವೆ ನಲ್ಲೆ!
ಮಂದ ನೀಲ ಬಾನಿನಲ್ಲಿ ಅಂದವಾದ ಬೆಳ್ಳಿ ಕಾಸು; ಕಣ್ಣು ಹೊಡೆದು ಕೆಣಕುತಿರುವ ಬಣ್ಣ ತಳೆದ ಚಿಕ್ಕೆ ಹಾಸು; ಯಾರೋ ಹಚ್ಚಿಟ್ಟ ಧೂಪದಿಂದ ಬರುವ ಘಮ್ಮೆನ್ನುವ ಧೂಮ; ಸುತ್ತ ಸುಳಿಯುತಿರುವರಿಲ್ಲೇ ರತಿ ಮತ್ತು ಕಾಮ; ಜೊನ್ನ ಜೇನಿನಲ್ಲಿ ಹೊನ್ನಾಗಿದೆ ಧಾತ್ರಿ...